ಸಾಸ್ವೆಹಳ್ಳಿ: ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಸಹಸ್ರಾರು ಭಕ್ತರಿಗೆ ಮಾರ್ಗದರ್ಶನ ಮಾಡಿದ್ದಾರೆ. ಇಂದಿಗೂ ಅವರ ಇದ್ದಾರೆ ಎಂದು ಭಾಸವಾಗುತ್ತದೆ. ಅವರನ್ನು ನೆನೆದು ಮಾಡಿದ ಕೆಲಸಗಳು ಕೈಗೂಡುತ್ತಿವೆ. ಅವರ ಮಾರ್ಗದರ್ಶನದಲ್ಲಿ ನಾವು ಇಂದಿಗೂ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಹೊಟ್ಯಾಪುರ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಇಲ್ಲಿನ ಕಲ್ಲೇಶ್ವರ ದೇವಸ್ಥಾನದಲ್ಲಿ ನಡೆದ ರಾಂಪುರ ಬೃಹನ್ಮಠದ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾಂiÀರ್i ಹಾಲಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆಯಲ್ಲಿ ಅವರು ಸೋಮವಾರ ಮಾತನಾಡಿದರು.
ರಾಂಪುರ ಬೃಹನ್ಮಠದ ಶಿವಕುಮಾರ ಶಿವಾಚಾರ್ಯ ಹಾಲಸ್ವಾಮಿಗಳು ಮಾತನಾಡಿ, ಪೀಠಾಧ್ಯಕ್ಷರಾಗಿ ಬಸವಪಟ್ಟಣ, ರಾಂಪುರ ಮಠಗಳ ಅಭಿವೃದ್ಧಿಯನ್ನು ಮಾಡಿದ್ದಾರೆ. ಅವರು ರಾಂಪುರ ಗೋವಿನಕೋವಿ ಸೇತುವೆಯ ನಿರ್ಮಾಣ, ರಾಂಪುರದಲ್ಲಿ ಗೋಶಾಲೆ ಆರಂಭ, ಬಸವಪಟ್ಟಣದಲ್ಲಿ ಕಾಲೇಜು ಪ್ರಾರಭ ಮಾಡುವ ಇಂಗಿತವನ್ನು ಹೊಂದಿದ್ದರು. ಅವರ ಕನಸುಗಳನ್ನು ಸಕಾರ ಮಾಡುವ ಹೊಣೆಗಾರಿಕೆಯು ನಮ್ಮ ಮೇಲಿದೆ. ಸದ್ಭಕ್ತರ ಸಹಕಾರದಿಂದ ರಾಂಪುರ ಮಠದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಭಕ್ತರ ಪ್ರೀತಿಗೆ ಮಠವು ಚಿರಋಣಿಯಾಗಿದೆ ಎಂದರು.
ಎಎಸ್‍ಐ ಟಿ.ಪರಶುರಾಮಪ್ಪ, ಕಲ್ಲೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷÀ ರಮೇಶ್ ನಾಡಿಗ್, ಕಾರ್ಯದರ್ಶಿ ಡಿ.ಆರ್.ರವಿ, ಸದಸ್ಯರಾದ ಎಂ.ಜಿ.ಚಂದ್ರಶೇಖರಯ್ಯ, ಲೋಹಿತಾಚಾರ್, ಎನ್.ಆರ್.ಸಿದ್ದಪ್ಪ, ಕರಿಬಸಪ್ಪ, ಮಂಜು,ಕೋಟೆ ಮಂಜಣ್ಣ ಇದ್ದರು.