ಮಾನ್ಯ ಜನಪ್ರಿಯ ಶಾಸಕರಾದ ಎಸ್ ರಾಮಪ್ಪ ಇವರ ಸಮ್ಮುಖದಲ್ಲಿ ಹರಿಹರ ತಾಲ್ಲೂಕು ಯಲವಟ್ಟಿ ಗ್ರಾಮದ ಮುಖಂಡರಾದ ಅನಂತನಾಯ್ಕ ಇವರೊಂದಿಗೆ ಹಲವರು ಜೆ.ಡಿ.ಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಲೆಬೆನ್ನೂರು ಬ್ಲಾಕ್ ಅಧ್ಯಕ್ಷರಾದ ಎಮ್.ಬಿ. ಅಬಿದಲಿಯವರು,ಹರಿಹರ ಬ್ಲಾಕ್ ಅಧ್ಯಕ್ಷರಾದ ಎಲ್.ಬಿ ಹನುಮಂತಪ್ಪನವರು,ಡಿ.ಸಿ.ಸಿ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಪಿ.ಎಸ್ ಹನುಮಂತಪ್ಪನವರು ಹಾಗೂ ಡಿ.ಸಿ.ಸಿ ಬ್ಯಾಂಕ್ ನ ಉಪಾಧ್ಯಕ್ಷರಾದ ಜಿಗಳಿ ಆನಂದಪ್ಪನವರು,ತಾಲೂಕು ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಎಸ್.ಜಿ ಪರಮೇಶಪ್ಪನವರು,ಎಸ್.ಸಿ ಘಟಕದ ಅಧ್ಯಕ್ಷರಾದ ಅಜ್ಜಾನಾಯ್ಕರವರು,ಹಾಗೂ ಮುಖಂಡರಾದ ಕುಂಬಳೂರು ವಿರುಪಾಕ್ಷಪ್ಪನವರು ಹಾಗೂ ಸಮಾಜಿಕ ಜಾಲತಾಣದ ಅದ್ಯಕ್ಷರಾದ ರಾಜು ಹೊರಟ್ಟಿ ಹಾಗೂ ಇತರೆ ಮುಖಂಡರು ಭಾಗವಹಿಸಿದ್ದರು.