ಚಾಲನೆ

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯುತ್ತಿರುವುದು
ಮಕ್ಕಳ ಶಿಕ್ಷಣ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದು
ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ
ತಿಳಿಸಿದರು.
ಶಿಕ್ಷಣ ಇಲಾಖೆಯಿಂದ ಜಗಳೂರು ತಾಲ್ಲೂಕಿನ ಪಲ್ಲಗಟ್ಟೆಯಲ್ಲಿ
ಮಂಗಳವಾರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ

ಆಯೋಜಿಸಿದ್ದ ಒಂದನೇ ಹಾಗೂ ಎರಡನೇ ತರಗತಿ ಆಂಗ್ಲ ಮಾಧ್ಯಮ
ಶಾಲೆಯ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಸುತ್ತಮುತ್ತ ಇರುವ ಗ್ರಾಮದ ಎಲ್ಲಾ ಮಕ್ಕಳು ಇಂಗ್ಲೀಷ್
ಕಲಿಯಬೇಕೆನ್ನುವ ವಾತಾವರಣ ಸೃಷ್ಟಿ ಮಾಡಿರುವ ಶಾಸಕರಾದ
ಎಸ್.ವಿ.ರಾಮಚಂದ್ರಪ್ಪ ಅವರಿಗೆ ಅಭಿನಂದಿಸಿದ ಅವರು, ತಾಲ್ಲೂಕಿನಲ್ಲಿ ಹೆಚ್ಚು
ಹೆಚ್ಚು ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದು
ಅಭಿನಂದನಾರ್ಹ ಎಂದು ಸಂತಸ ವ್ಯಕ್ತಪಡಿಸಿದರು.
ಜನರ ಪರವಾಗಿ ಹಾಗೂ ಕ್ಷೇತ್ರಕ್ಕಾಗಿ ಸದಾ ಕೆಲಸ ಮಾಡಬೇಕು.
ಜಗಳೂರು ತಾಲ್ಲೂಕಿನ ಅಭಿವೃದ್ಧಿಗಾಗಿ ನಿಮ್ಮೊಂದಿಗೆ ಸದಾ ನಾನು
ಇರುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕ
ಎಸ್.ವಿ.ರಾಮಚಂದ್ರಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ
ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಮಹಾಂತೇಶ
ಸೇರಿದಂತೆ ತಾಲ್ಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *