ದಾವಣಗೆರೆ ಜಿಲ್ಲಾ ಗೃಹರಕ್ಷಕಕದಳದ ಐದು ಮಂದಿ
ಅಧಿಕಾರಿಗಳು ಮಾನ್ಯ ಮುಖ್ಯಮಂತ್ರಿಗಳ ಚಿನ್ನದ
ಪದಕಕ್ಕೆ ಭಾಜನರಾಗಿದ್ದು, ಜು.13 ರಂದು ಬೆಂಗಳೂರಿನ
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ
ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು.
ಚಿನ್ನದ ಪದಕ ಪಡೆದವರ ವಿವರ : 2016 ನೇ ಸಾಲಿನಲ್ಲಿ
ಡಾ.ಬಿ.ಹೆಚ್.ವೀರಪ್ಪ ನಿವೃತ್ತ ಸಮಾದೇಷ್ಟರು. 2019 ನೇ
ಸಾಲಿನಲ್ಲಿ ಜಿ.ಸಂದೀಪ್, ಉಪ ಸಮಾದೇಷ್ಟರು ಪ್ರಾದೇಶಿಕ ತರಬೇತಿ
ಕೇಂದ್ರ ದೇವಬೆಳೆಕೆರೆ ದಾವಣಗೆರೆ ಜಿಲ್ಲೆ. 2018 ನೇ ಸಾಲಿನಲ್ಲಿ
ಜಿ.ಹೆಚ್.ಲೋಕೇಶ್ ಬೋಧಕರು. 2018 ನೇ ಸಾಲಿನಲ್ಲಿ ಕೆ.ರಾಮಣ್ಣ,
ನಿವೃತ್ತ ಕಂಪನಿ ಕಮಾಂಡರ್. 2019 ನೇ ಸಾಲಿನಲ್ಲಿ ನೀಲಕಂಠಪ್ಪ,
ನಿವೃತ್ತ ಪ್ಲಟೂನ್ ಕಮಾಂಡರ್.

ಚಿನ್ನದ ಪದಕಕ್ಕೆ ಭಾಜನರಾದ ಅಧಿಕಾರಿಗಳಿಗೆ ಜಿಲ್ಲಾ
ಗೃಹರಕ್ಷಕದಳದ ಸಮಾದೇಷ್ಟಕರಾದ ರಾಜೀವ್.ಎಂ,
ಕಚೇರಿ ಸಿಬ್ಬಂದಿ, ಜಿಲ್ಲೆಯ ಎಲ್ಲಾ ಘಟಕಗಳ ಗೃಹರಕ್ಷಕ
ಅಧಿಕಾರಿಗಳು ಮತ್ತು ಸದಸ್ಯರು ಅಭಿನಂದನೆ
ಸಲ್ಲಿಸಿರುತ್ತಾರೆಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *