ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡದ ಶಾಲೆಗಳ ಮಾನ್ಯತೆ
ರದ್ದು- ಡಿಸಿ ಎಚ್ಚರಿಕೆ
ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಜು. 19 ಹಾಗೂ 22 ರಂದು
ಜರುಗುತ್ತಿದ್ದು, ಶಾಲಾ ಶುಲ್ಕ ಪಾವತಿಸಿಲ್ಲ ಎಂಬ ಕಾರಣವೊಡ್ಡಿ ವಿದ್ಯಾರ್ಥಿಗಳಿಗೆ
ಪ್ರವೇಶ ಪತ್ರ ನೀಡದಿರುವುದನ್ನು ಗಂಭೀರವಾಗಿ
ಪರಿಗಣಿಸಲಾಗಿದ್ದು, ಅಂತಹ ಶಾಲೆಗಳ ಮಾನ್ಯತೆ
ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಎಚ್ಚರಿಕೆ ನೀಡಿದ್ದಾರೆ.
ಜು. 19 ಮತ್ತು 22 ರಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜರುಗಲಿದ್ದು, ಜಿಲ್ಲೆಯ
ನೋಂದಾಯಿತ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಸೂಚನೆ
ನೀಡಲಾಗಿದೆ.
ಆದರೆ ಕೆಲವು ಅನುದಾನ ರಹಿತ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ
ಹಾಜರಾಗುವ ವಿದ್ಯಾರ್ಥಿಗಳು ಶಾಲಾ ಶುಲ್ಕವನ್ನು ಪಾವತಿಸದೇ
ಇರುವುದರಿಂದ ಪ್ರವೇಶ ಪತ್ರಗಳನ್ನು ನೀಡುತ್ತಿಲ್ಲ ಎಂಬ
ದೂರುಗಳು ಬಂದಿರುತ್ತವೆ. ಇದು ಕರ್ನಾಟಕ ಶಿಕ್ಷಣ ಕಾಯ್ದೆ 1983 ರ
ಉಲ್ಲಂಘನೆಯಾಗಿದ್ದು, ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗಾಗಿ
ಅನುದಾನ ರಹಿತ ಶಾಲೆ ಹಾಗೂ ಆಡಳಿತ ಮಂಡಳಿಯವರು
ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನು ನೀಡಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ
ಹಾಜರಾಗುವಂತೆ ಮಾಡುವುದು ಆಯಾ ಶಾಲೆಯ ಮುಖ್ಯ ಶಿಕ್ಷಕರು
ಮತ್ತು ಆಡಳಿತ ಮಂಡಳಿಯವರ ಜವಾಬ್ದಾರಿಯಾಗಿರುತ್ತದೆ.
ನಿಯಮ ಉಲ್ಲಂಘನೆ ಮಾಡಿದಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ 1983 ರ
ಪ್ರಕಾರ ಶಾಲಾ ಮಾನ್ಯತೆಯನ್ನು ರದ್ದು ಮಾಡಲಾಗುವುದು.
ಪ್ರವೇಶ ಪತ್ರಗಳಿಗೆ ಸಂಬಂಧಿಸಿದ ದೂರುಗಳಿಗೆ ಆಯಾ ತಾಲ್ಲೂಕಿನ
ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ವಹಿಸುವಂತೆ ಸೂಚನೆ
ನೀಡಲಾಗಿದೆ.
ವಿದ್ಯಾರ್ಥಿಗಳು ಹಾಗೂ ಪೋಷಕರು ಎಸ್‍ಎಸ್‍ಎಲ್‍ಸಿ ಪರೀಕ್ಷೆಯ
ಪ್ರವೇಶ ಪತ್ರಕ್ಕೆ ಸಂಬಂಧಿಸಿದ ದೂರುಗಳಿಗೆ ಆಯಾ ತಾಲ್ಲೂಕಿನ
ಕ್ಷೇತ್ರ ಶಿಕ್ಷಣಾಧಿಕಾರಿಗಳ ದೂರವಾಣಿ ಸಂಖ್ಯೆ ಚನ್ನಗಿರಿ 9480695170,
ದಾವಣಗೆರೆ ಉತ್ತರ ವಲಯ 9480695172, ದಾವಣಗೆರೆ ದಕ್ಷಿಣ ವಲಯ-
9480695171, ಹರಿಹರ 9480695174, ಹೊನ್ನಾಳಿ 9480695175, ಜಗಳೂರು
9480695176 ಕ್ಕೆ ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.