ಹೊನ್ನಾಳಿ: ಬಂಜಾರ ಸಮುದಾಯದ ಸಹಕಾರದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಾಮಾನಿಕ ಪ್ರಯತ್ನ ನಾನು ಮಾಡುತ್ತೇನೆ ನನ್ನ ಧ್ವನಿ ಲಂಬಾಣಿ ಸಮಾಜದ ಪರ ಸದಾ ಇದೆ ಎಂದು
ಕೆಪಿಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಗ್ರಾಮದ ಸಂತಸೇವಾಲಾಲರ್ ಭಾಯಗಡ್ ಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲಂಬಾಣಿ ಸಮುದಾಯದವರೊಡನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಂಬಾಣಿ ಜನಾಂಗದ ಪುರಾತನ ಕಾಲದಿಂದ ಆಚರಿಸಿಕೊಂಡು ಬಂದಿರುವ ಸಂಸ್ಕøತಿ ಬದಲಾಗಿಲ್ಲ ಸಮಾಜದ ಸಮಸ್ಯೆಗಳು ನಿರಂತರ ಬದಲಾವಣೆಯಾಗಿವೆ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವುದು ಮುಖ್ಯವಾಗಿದೆ ಎಂದರು.
ಲಂಬಾಣಿ ಸಮುದಾಯದ ಜೊತೆಗೆ ಬೆಳೆದವನು ನಾನು, ನಾನು ಲಂಬಾಣಿ ಸಮುದಾಯದ ಎಲ್ಲಾ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ ಸಮಾಜದವರು ಉತ್ತಮ ಬದುಕು ರೂಪಿಸಿಕೊಳ್ಳಲು ಸರ್ವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಲಂಬಾಣಿ ಸಮುದಾಯದವರು ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ತಮ್ಮ ಬದುಕನ್ನು ಸಾಗಿಸುತ್ತಿದ್ದಾರೆ. ಕಷ್ಟುಪಟ್ಟು ಜೀವನ ಸಾಗಿಸುವ ಏಕೈಕ ಸಮಾಜ ಎಂದರೆ ಲಂಬಾಣಿ ಸಮಾಜ ರಾಜಕೀಯ ಮಾತನ್ನು ನಾನು ಮಾತನಾಡಲು ಇಲ್ಲಿಗೆ ಬಂದಿಲ್ಲ ಸಮದಾಯದ ವ್ಯಕ್ತಿಗಳ ಪ್ರಶ್ನೆಗಳನ್ನು ಆಲಿಸಿ ಸಂವಾದ ಮಾಡಲು ಬಂದಿದ್ದೇನೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಲ್ಲಾ ಸಮಾಜದ ಕಷ್ಟಸುಖಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇವೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಮುಂದಿನ ದಿನಗಳಲ್ಲಿ ಕುಲ ಕಸಬು ಮಾಡುವ ಎಲ್ಲಾ ಸಮಾಜದ ಬಾಂಧವರ ಸಭೆ ಕರೆದು ಸಂವಾದ ಮಾಡುತ್ತೇನೆ. ಇಂತಹ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಕೆಳ ವರ್ಗದ ಸಮಾಜದ ಸಂಕಷ್ಟಗಳು ನಮಗೆ ಅರಿವಾಗುತ್ತವೆ ಎಂದು ಹೇಳಿದರು.
ಸಂವಾದದಲ್ಲಿ ಗುಳೆ ಹೋಗುವುದನ್ನು ತಡಗಟ್ಟುವುದು, ಬಗರ್ ಹುಕುಂ ಸಾಗುವಳಿದಾದರ ಸಮಸ್ಯೆ ಉತ್ಯರ್ಥ ಮಾಡುವುದು, ಸಮಾಜಕ್ಕೆ ಸದಾಶಿವ ಆಯೋಗದಿಂದಾಗುವ ನಷ್ಟ ಹಾಗೂ ಆಯೋಗವನ್ನು ಕೈಬಿಡುವುದು, ಲಂಬಾಣಿ ಜನಾಂಗದ ಮಹಿಳೆಯರಲ್ಲಿ ಹೆಚ್ಚು ಗರ್ಭಕೋಶದ ಕ್ಯಾನ್ಸರ್ ರೋಗ ಕಾಣಿಸುವುದು, ಸಮ ಸಮಾಜ ನಿರ್ಮಾಣವಾಗದೇ ಇರುವುದು ಸೇರಿದಂತೆ ಇತರ ಅಂಶಗಳ ಬಗ್ಗೆ ಸಮಾಜದ ಯುವಕ, ಯುವತಿಯರು ಹಾಗೂ ಮುಖಂಡರುಗಳು ಸಂವಾದದಲ್ಲಿ ಪ್ರಶ್ನೆ ಮಾಡಿದರು.
ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಡಿಕೆಸಿ ಎಲ್ಲಾ ಬೇಡಿಕೆಗಳ ಪ್ರಶ್ನೆಗೆ ಕೂಲಂಕುಶವಾಗಿ ಚಿಂತನೆ ಮಾಡಿ ಕ್ರಮ ಕೈಗೊಳ್ಳಲು ಹೋರಾಟ ಮಾಡಲು ನಾನು ಬದ್ಧ ಎಂದು ಹೇಳಿದರು.
ಸಮಾಜಿಕ ಅಂತರ ಮಾಯ:ಕಾರ್ಯಕ್ರಮದಲ್ಲಿ ಸಮಾಜಿಕ ಅಂತರ ಮಾಯವಾಗಿತ್ತು. ಕರೊನಾ ಹೋಗಿಯೇ ಬಿಟ್ಟಿದೆ ಎನ್ನುವ ರೀತಿಯಲ್ಲಿ ಜನರು ವರ್ತಿಸಿದರು.
ಮುಖಂಡರುಗಳು, ಕಾರ್ಯಕರ್ತರು ಸಾಗರೋಪಾದಿಯಲ್ಲಿ ವೇದಿಕೆ ಸಮೀಪ ಬಂದು ಕೆಪಿಸಿಸಿ ಅಧ್ಯಕ್ಷರಿಗೆ ಹೂವಿನ ಹಾರ ಹಾಕಲು, ಸನ್ಮಾನ ಮಾಡಲು ಬರುತ್ತಿದ್ದು ಇದರಿಂದ ಸಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಆಯೋಜಕರಿಗೆ ಸಾಧ್ಯವಾಗಲಿಲ್ಲ.
ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ಮಾಜಿ ಸಚಿವ ರುದ್ರಪ್ಪಲಮಾಣಿ, ಹೂವಿನ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿದರು. ಮಾಜಿ ಸಚಿವ ಬಾಬುರಾವ್ಚವ್ಹಾಣ್, ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಮಾಜಿ ಶಾಸಕರಾದ ಡಿ.ಜಿ.ಶಾಂತನಗೌಡ, ಶಿವಮೂರ್ತಿನಾಯ್ಕ, ಶ್ರೀನಿವಾಸ್, ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರನಾಯ್ಕ, ಉಪಾಧ್ಯಕ್ಷ ಡಾ.ಎಲ್.ಈಶ್ವರನಾಯ್ಕ ಇತರರು ಉಪಸ್ಥಿತರಿದ್ದರು.
ಎಚ್ಎನ್ಎಲ್ ಸೂರಗೊಂಡನಕೊಪ್ಪ ಜುಲೈ 15 :ಹೊನ್ನಾಳಿ:ನ್ಯಾಮತಿ ತಾಲೂಕು ಸೂರಗೊಂಡನಕೊಪ್ಪ ಗ್ರಾಮದ ಸಂತ ಸೇವಾಲಾಲ್ ಜನ್ಮಸ್ಥಾನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಲಂಬಾಣಿ ಸಮಾಜದ ವತಿಯಿಂದ
ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ಮಾಜಿ ಸಚಿವ ರುದ್ರಪ್ಪಲಮಾಣಿ, ಹೂವಿನ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹಾಗೂ , ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರನಾಯ್ಕ ಸನ್ಮಾನಿಸಿದರು.