ವಿರುದ್ಧ ಕಾನೂನು ಕ್ರಮ
ಪ್ರಿವೆನ್ಷನ್ ಆಫ್ ಕ್ರುಯಾಲಿಟಿ ಟು ಅನಿಮಲ್ಸ್ ಆ್ಯಕ್ಟ್ 1960 ರ ಪ್ರಕಾರ
2015 ಆಗಸ್ಟ್ 14 ರ ಸರ್ಕಾರದ ಅದೇಶದಂತೆ ಕಾನೂನು ಬಾಹೀರವಾಗಿ
ಪ್ರಾಣಿಗಳ ಅಕ್ರಮ ವಧೆ, ಸಾಗಾಣಿಕೆ ಹಾಗೂ ಮಾರಾಟ ಮಾಡುವುದು
ಕಂಡು ಬಂದಲ್ಲಿ ಸಂಬಂಧಪಟ್ಟ ಮಾಲೀಕರ ವಿರುದ್ಧ ಕಾನೂನು ಕ್ರಮ
ತೆಗೆದುಕೊಳ್ಳಲಾಗುವುದು.
ಪ್ರಾಣಿಗಳ ಮೇಲಿನ ಕ್ರೌರ್ಯ ಪ್ರತಿ ಬಂಧಕ (ಕಸಾಯಿ ಖಾನೆ)
ನಿಯಮಾವಳಿಗಳು 2001 ಹಾಗೂ ಕರ್ನಾಟಕ ಗೋಹತ್ಯೆ ನಿಯಂತ್ರಣ
ಮತ್ತು ಜಾನುವಾರು ಸಂರಕ್ಷಣೆ ವಿಧೇಯಕ 2020 ರನ್ವಯ ಒಂಟೆ,
ಗೋವುಗಳ ಅಕ್ರಮ ಹತ್ಯೆ, ಸಾಗಾಣಿಕೆ ಹಾಗೂ ಮಾರಾಟವನ್ನು
ತಡೆಗಟ್ಟುವ ಬಗ್ಗೆ 1976 ರ ಅಧಿನಿಯಮದಲ್ಲಿ ಮಹಾನಗರ ಪಾಲಿಕೆಯು
ತಿಳಿಸಿರುತ್ತದೆ.
ಈ ಕಾಯ್ದೆಗಳ ಅನ್ವಯ ಒಂಟೆ, ಗೋವುಗಳ ಅಕ್ರಮ ಹತ್ಯೆ,
ಸಾಗಾಣಿಕೆ ಹಾಗೂ ಮಾರಾಟ ಮಾಡುವುದು ಕಾನೂನು ರೀತಿಯ ಶಿಕ್ಷಾರ್ಹ
ಅಪರಾಧವಾಗಿರುತ್ತದೆ. ಹೀಗಾಗಿ ಈ ಆದೇಶವನ್ನು ಉಲ್ಲಂಘನೆ ಮಾಡಿ
ಕಾನೂನು ಬಾಹೀರವಾಗಿ ಪ್ರಾಣಿಗಳ ಅಕ್ರಮ ವಧೆ, ಸಾಗಾಣಿಕೆ ಹಾಗೂ
ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಕಾನೂನು
ರೀತಿಯ ಕ್ರಮ ಕೈಗೊಳ್ಳಲಾಗುವುದೆಂದು ಮಹಾನಗರ ಪಾಲಿಕೆಯ
ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾ