ಹೊನ್ನಾಳಿ, ಜು.15: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರವು ದೀಪ ಬೆಳಗಿಸುವುದರ ಮೂಲಕ ಚಾಲನೆ ಯನ್ನು ಕೊಡಲಾಯಿತು.

ಜಿಲ್ಲಾ ಯೋಜನಾಧಿಕಾರಿಯಾದ ಜಯಂತ್ ಪೂಜಾರ್‌ ರವರು ಮಾತನಾಡಿ ಹೊನ್ನಾಳಿ ತಾಲ್ಲೂಕಿನಲ್ಲಿ ಒಟ್ಟು 1844 ಸಂಘಗಳಿದ್ದು, ಈ ಸಂಘಗಳಿಗೆ ಒಟ್ಟು ಲಾಭಾಂಶ 2 ಕೋಟಿ ಹದಿನೈದು ಲಕ್ಷ 79 ಸಾವಿರ ಹಣ ಬಿಡುಗಡೆಯಾಗಿದೆ. ಡಾ ವೀರೇಂದ್ರ ಹೆಗ್ಗಡೆ ಯವರ ಅಪ್ಪಣೆಯಂತೆ ಎಲ್ಲಾ ಸ್ವಸಹಾಯ ಸಂಘಗಳಿಗೆ ಲಾಭಾಂಶವನ್ನು ವಿತರಿಸುವ ಕಾರ್ಯಕ್ರಮವನ್ನು

ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಯೋಜನೆಯ ಬಸವರಾಜ ಅಂಗಡಿ, ಪೊಲೀಸ್ ಇಲಾಖೆಯ ಸಿಪಿಐ ದೇವರಾಜ್ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಹೆಚ್.ಎ ಉಮಾಪತಿ, ಜನಜಾಗೃತಿ ಸದಸ್ಯರಾದ ವೇದಿಕೆಯ ಕುಮಾರಸ್ವಾಮಿ , ಬಿ.ಎಲ್ ಮಂಜಪ್ಪ ಸರಳಿನಮನೆ, ಕತ್ತಿಗೆ ನಾಗರಾಜ್, ಶಿವರಾಂ, ರಾಘವೇಂದ್ರ, ವ್ಯವಸ್ಥಾಪಕ ನಾಗರಾಜ್, ಪ್ರದೀಪ್ ಆರ್ ಹೆಗಡೆ ಕೃಷಿ ಅಧಿಕಾರಿ, ಮಂಜುಳಾ, ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *