ಹೊನ್ನಾಳಿ ; ಕರೊನಾ ಬಾರದಂತೆ ತಡೆಯಲು ಹಾಗೂ ವಿಶೇಷವಾಗಿ ಗರ್ಭಿಣಿಯರಿಗೆ ಕರೊನಾ ಲಸಿಕೆ ಅವಶ್ಯವಾಗಿ ಹಾಕಿಸಿಕೊಳ್ಳಬೇಕು ಇದರಿಂದ ಯಾವುದೇ ಅಪಾಯ ಇಲ್ಲ ಎಂದು ತಜ್ಞರೇ ಹೇಳಿರುವುದರಿಂದ ಗರ್ಭಿಣಿಯರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯಬೇಡಿ ಎಂದು ಸಿ.ಎಂ.ರಾಜಕೀಯ ಕಾರ್ಯದರ್ಶಿ,ಶಾಸಕ ಎಂಪಿ.ರೇಣುಕಾಚಾರ್ಯ ಮನವಿ ಮಾಡಿದರು.
ನಗರದ ಅಂಬೇಡ್ಕರ್ ಭವನ ಹಾಗೂ ನ್ಯಾಮತಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದರು.
ಅವಳಿ ತಾಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ 800 ಲಸಿಕೆಯನ್ನು ಗರ್ಭಿಣಿಯರು ಹಾಗೂ 45 ವರ್ಷ ಮೇಲ್ಪಟ್ಟ ಎರಡನೇ ಡೋಸ್ ಲಸಿಕೆ ನೀಡಲಾಯಿತು ಎಂದು ವಿವರಿಸಿದರು.
ಅವಳಿ ತಾಲೂಕಿನಾಧ್ಯಂತ 45 ವರ್ಷ ಮೇಲ್ಪಟ್ಟವರಿಗೆ 59,967 ಗುರಿ ಇದ್ದು,ಅದರಲ್ಲಿ 58,860 ಲಸಿಕೆ ಹಾಕಿದ್ದು ಶೇ 98 ರಷ್ಟು ಗುರಿ ಮುಟ್ಟಿದ್ದೇವೆ,ಅದೇ ರೀತಿ 20,589 ಜನರಿಗೆ ಲಸಿಕೆ ಹಾಕಿದ್ದು,ಇನ್ನು 80 ಸಾವಿರ ಜನರಿಗೆ ಲಸಿಕೆ ಹಾಕಿಸಬೇಕಿದೆ 18 ಹಾಗೂ 45 ವರ್ಷ ಮೇಲ್ಪಟ್ಟ 84,260 ಜನರಿಗೆ ಈಗಾಗಲೆ ಲಸಿಕೆ ಹಾಕಲಾಗಿದೆ, ಉಳಿದವರಿಗೂ ಸಹ ಹಂತ ಹಂತವಾಗಿ ಲಸಿಕೆ ಹಾಕಿಸಲಾಗುವುದು ಎಂದರು.
ಅವಳಿ ತಾಲೂಕಿನ ಪ್ರತಿಯೊಂದು ಹಳ್ಳಿಗೂ ಈಗಾಗಲೇ ಲಸಿಕೆ ಪೂರೈಕೆ ಮಾಡಲಾಗಿದ್ದು ಎಲ್ಲರಿಗೂ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ ಕೊನೆ ಭಾಗದ ಹಳ್ಳಿಗಳಲ್ಲೂ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡಲಾಗಿದ್ದು ಎಲ್ಲರೂ ಲಸಿಕೆಯ ಸದುಪಯೋಗ ಪಡೆದುಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಮಾತೂ ಎಂದೂ ಕೂಡ ಸಾಧನೆಯಾಗ ಬಾರದು ಸಾಧನೆ ಮಾತಾಗ ಬೇಕೆಂಬಂತೆ ನಾನು ಕೆಲಸ ಮಾಡುತ್ತಿದ್ದೇನೆ, ಎಲ್ಲರಿಗೂ ಲಸಿಕೆ ಹಾಕಿಸುವುದು ನನ್ನ ಆಧ್ಯ ಕರ್ತವ್ಯ, ನನ್ನ ಆರೋಗ್ಯಕ್ಕಿಂತ ಕ್ಷೇತ್ರದ ಜನರ ಆರೋಗ್ಯ ನನಗೆ ಮುಖ್ಯ ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದರು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಸದಸ್ಯರಾದ ರಂಗಪ್ಪ, ಓಬಳದಾರ್ ಬಾಬಣ್ಣ,ಸತೀಶ್, ಮುಖಂಡರಾದ ಪಲ್ಲವಿರಾಜು, ಚಂದ್ರು, ಮಹೇಶ್ ಹುಡೇದ್ ಸೇರಿದಂತೆ ದಾದಿಯರು, ಆಶಾ ಕಾರ್ಯಕರ್ತರಿದ್ದರು.