ವಿಕಲಚೇತನರು ಸ್ವಾವಲಂಬಿ ಜೀವನ ನಡೆಸಲು ಎಸ್ಸೆಸ್ ಕರೆ
ದಾವಣಗೆರೆ: ರಾಜ್ಯ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ವಿಕಲಚೇತನರಿಗೆ ನೀಡುವ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ಶನಿವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ವಿತರಿಸಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಐವರು ವಿಕಲಚೇತನರಾದ ಕೆ.ಬಿ.ಅಕ್ಬರ್, ನೂರುಲ್ಲಾ, ಮುಕುಂದ ಸಾ ಆರ್.ಬಿ., ಮಂಜುನಾಥ್ ಮತ್ತು ಎಸ್.ಸಿ.ರಮೇಶ್ ಅವರುಗಳಿಗೆ ವಾಹನಗಳನ್ನು ವಿತರಿಸಲಾಯಿತು.
ನಂತರ ವಿಕಲಚೇತನರನ್ನುದ್ದೇಶಿಸಿ ಮಾತನಾಡಿದ ಶಾಸಕರು ವಿಕಲಚೇತನರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಮಲ್ಲಿಕಾರ್ಜುನ ಮಠದ, ಮಾರುತಿ ಬಿ.ಎಸ್., ಚನ್ನಪ್ಪ ಬಿ., ಮಹಾನಗರ ಪಾಲಿಕೆಯ ಸದಸ್ಯ ಸೈಯದ್ ಚಾರ್ಲಿ ಮತ್ತಿತರರು ಉಪಸ್ಥಿತರಿದ್ದರು.