ತಾಯಿ, ಮಗುವಿನ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ಧನದ ಮಂಜೂರಾತಿ ಪತ್ರ ವಿತರಣೆ
ಭಾಲ್ಕಿ ತಾಲೂಕಿನ ಖುದಾವಂದಪೂರ್ ಗ್ರಾಮದಲ್ಲಿ ಸಿಡಿಲಿಗೆ ಮೃತರಾದ ತಾಯಿ ಹಾಗುಮಗುವಿನ ಮನೆಗೆ ಭಾನುವಾರ ಶಾಸಕ ಈಶ್ವರ ಖಂಡ್ರೆ ಭೇಟಿ ನೀಡಿ ಧೈರ್ಯ ತುಂಬಿದರು.
ಕೃಷಿ ಚಟುವಟಿಕೆ ನಿಮಿತ್ತ ಹೊಲಕ್ಕೆ ತೆರಳಿದ ಸಂದರ್ಭದಲ್ಲಿ ಈಚೆಗೆ ಸಿಡಿಲು ಬಡಿದು ಭಾಗ್ಯಶ್ರೀ ಭೀಮ ಮತ್ತು ವೈಶಾಲಿ ಭೀಮ ಸ್ಥಳದಲ್ಲೇ ಮೃತ ಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಶಾಸಕ ಈಶ್ವರ ಖಂಡ್ರೆ ಅವರು ಭೀಮ ರಾಮಣ್ಣ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಸರಕಾರದಿಂದ ಮಂಜೂರು ಮಾಡಿಸಿದ 10 ಲಕ್ಷ ರೂ ಪರಿಹಾರ ಧನದ ಮಂಜೂರಾತಿ ಪತ್ರ ವಿತರಿಸಿದರು.
ಸಿಡಿಲಿಗೆ ತಾಯಿ ಹಾಗೂ ಮಗು ಮೃತ ಪಟ್ಟಿರುವ ವಿಷಯ ತಿಳಿದು ಮನಸ್ಸಿಗೆ ತೀವ್ರ ಆಘಾತ ತರಿಸಿತು.
ನಾನು ಬೆಂಗಳೂರಿನಲ್ಲಿ ಇದ್ದರೂ ಕೂಡ ತಕ್ಷಣವೇ ತಾಲೂಕು ಆಡಳಿತದ ಅಧಿಕಾರಿಗಳ ಜತೆಗೆ ಸಂಪರ್ಕಿಸಿ ಸಾಧಿಸಿ ಸರಕಾರದಿಂದ ಸಿಗಬೇಕಾದ ಸೌಲಭ್ಯಕ್ಕೆ ಅಗತ್ಯ ಕಾಗದ, ಪತ್ರ ಸಂಗ್ರಹಿಸುವಂತೆ ಸೂಚನೆ ನೀಡಿದ್ದೇನೆ.
ಹಾಗಾಗಿ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿ ಪ್ರಕೃತಿ ವಿಕೋಪದಡಿ ತಲಾ 4 ಲಕ್ಷ ರೂ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಡಿ ತಲಾ 1 ಲಕ್ಷ ರೂ ಪರಿಹಾರ ಸೇರಿ 10 ಲಕ್ಷ ರೂ ಮಂಜೂರು ಮಾಡಿಸಿದ್ದೇನೆ. ಪರಿಹಾರ ಧನ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತಿತರ ಒಳ್ಳೆಯ ಕೆಲಸಕ್ಕೆ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಕಲ್ಯಾಣ ಕರ್ನಾಟಕದ ಕನಸುಗಾರ ಶ್ರೀ ಈಶ್ವರ ಖಂಡ್ರೆ