ರಾಜ್ಯ ಕಂಡ ಅತ್ಯಂತ ಪ್ರಾಮಾಣಿಕ ಹೋರಾಟಗಾರರು ಕಾವೇರಿ ನದಿ ನೀರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿದ ಮಾಜಿ ಸಂಸದರು ಧೀಮಂತ ನಾಯಕರಾದ ಜಿ. ಮಾದೇಗೌಡ ರವರ ನಿಧನ ರಾಜ್ಯ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ
ಜಿ.ಮಾದೇಗೌಡರ ಹೋರಾಟ ಶಾಶ್ವತವಾಗಿ ಕಾವೇರಿ ನದಿ ನೀರಿನ ಉಳಿವಿಗಾಗಿ ಹೋರಾಡಿ ಕಾವೇರಿ ಹಕ್ಕು ನಮ್ಮದು ಎಂಬುದನ್ನು ತೋರಿದ ಮಹಾನ್ ನಾಯಕ ಕಾವೇರಿ ನದಿ ನೀರಿನ ಉಳಿವಿನಿಂದ ರಾಜ್ಯದಲ್ಲಿ ರೈತರು ಹಾಗೂ ಜನರಜೀವ ಉಳಿಯುವಂತಾಗಿದೆ
ಜಿ.ಮಾದೇಗೌಡ ರವರ ದೃಢವಾದ ನಿಲುವು ಕಠಿಣ ಶ್ರಮ ಹೋರಾಟ ದಿಂದ ಇಂದು ಲಕ್ಷಾಂತರ ರೈತರು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ
ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸಿ ಕಾವೇರಿ ನದಿ ನೀರನ್ನು ರಾಜ್ಯದ ಹಕ್ಕೆಂದು ಪ್ರತಿಪಾದಿಸಿದ ಅತ್ಯಂತ ಶಕ್ತಿಶಾಲಿ ಹೋರಾಟಗಾರರಲ್ಲಿ ಮೊದಲಿಗರು ಜಿ.ಮಾದೇಗೌಡರು
ಅವರ ಅಗಲಿಕೆ ಇಡೀ ರಾಜ್ಯಕ್ಕೆ ರಾಷ್ಟ್ರಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ ಅವರ ಹೋರಾಟವನ್ನು ಪ್ರತಿಯೊಬ್ಬ ಮೈಗೂಡಿಸಿಕೊಳ್ಳಬೇಕು ಕನ್ನಡ ನೆಲ ಜಲ ಕಾವೇರಿ ಉಳಿವಿಗೆ ಅವರ ಪರಿಶ್ರಮವನ್ನು ನೆನೆದು ಜಿ.ಮಾದೇಗೌಡ ರವರ ಹೆಸರಿನಲ್ಲಿ ಶಾಶ್ವತವಾಗಿ ಕಾವೇರಿ ನದಿ ನೀರಾವರಿ ಬೃಹತ್ ಯೋಜನೆಗೆ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಈ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಜಿ.ಮಾದೇಗೌಡರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್.ಮನೋಹರ್, ಜಿ.ಜನಾರ್ದನ್, ಎ.ಆನಂದ್, ಈ.ಶೇಖರ್, ಎಂ.ಎ.ಸಲೀಂ, ಸುಧಾಕರ್, ಆದಿತ್ಯ, ಪ್ರಕಾಶ್, ಉಮೇಶ್,ಪುಟ್ಟರಾಜು, ಉಪಸ್ಥಿತರಿದ್ದರು