ಕಪ್ರ್ಯೂ: ಡಿ.ಸಿ

ಕೋವಿಡ್ -19ರ ಸಾಂಕ್ರಾಮಿಕ ರೋಗದ ಎರಡನೇ ಅಲೆಯ
ನಿಯಂತ್ರಣಾಕ್ಕಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಆ.02ರ ಬೆಳಿಗ್ಗೆ 6
ಗಂಟೆಯವರೆಗೆ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5
ಗಂಟೆಯವರೆಗೆ (ವಿನಾಯಿತಿ ಚಟುವಟಿಕೆ ಹೊರತುಪಡಿಸಿ) ರಾತ್ರಿ ಕಪ್ರ್ಯೂ
ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.
     ಸಿನಿಮಾ ಹಾಲ್, ಮಲ್ಟಿಫ್ಲೆಕ್ಸ್ ಥಿಯೇಟರ್‍ಗಳು, ರಂಗಮಂದಿರ ಮತ್ತು
ಆಡಿಟೋರಿಯಂಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ಶೇ.50 ರಷ್ಟು
ಆಸನ ಭರ್ತಿಗೆ ಅವಕಾಶವಿರುತ್ತದೆ.
ಉನ್ನತ ಶಿಕ್ಷಣ ಇಲಾಖೆ ನಿರ್ದೇಶನದಂತೆ ಕಾಲೇಜುಗಳು ಜು.26 ರಿಂದ
ಪ್ರಾರಂಭವಾಗಲಿದ್ದು, ಕೋವಿಡ್ ಮಾರ್ಗಸೂಚಿಯಂತೆ ಕಾಲೇಜಿಗೆ
ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಭೋದಕರು ಮತ್ತು ನೌಕರರು
ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿರಬೇಕು. ಹಾಗೂ ವಿದ್ಯಾರ್ಥಿಗಳಿಗೆ
ಹಾಜರಾತಿ ಐಚ್ಚಿಕವಾಗಿರುತ್ತದೆ.
     ಎಲ್ಲಾ ರೀತಿಯ ಕೌಶಲ್ಯಾಭಿವೃದ್ದಿ ತರಬೇತಿಗಳು ಹಾಗೂ ದೀರ್ಘಕಾಲಿನ
ತಾಂತ್ರಿಕ ಕೋರ್ಸ್‍ಗಳು ಕೋವಿಡ್ ಮಾರ್ಗಸೂಚಿಯಂತೆ
ನಡೆಯಬಹುದಾಗಿದ್ದು ಕಾಲೇಜಿಗೆ ಹಾಜರಾಗುವ ವಿದ್ಯಾರ್ಥಿಗಳು
ಭೋದಕ/ಭೋದಕೇತರ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿ ಕನಿಷ್ಠ ಒಂದು
ಡೋಸ್ ಲಸಿಕೆ ಪಡೆದಿರಬೇಕು.
  ಸರ್ಕಾರದ ಮಾರ್ಗಸೂಚಿ ನಿಬಂಧನೆಗಳನ್ನು ಯಾವುದೇ
ವ್ಯಕ್ತಿಗಳು ಉಲ್ಲಂಘಿಸಿದ ಪಕ್ಷದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ
ಕರ್ನಾಟಕ ಸಾಂಕ್ರಾಮಿಕ ಕಾಯ್ದೆನ್ವಯ ಕ್ರಮ
ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *