ಹೊನ್ನಾಳಿ : ಅವಳಿ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೂ ಲಸಿಕೆ ನೀಡುವ ಕೆಲಸ ಬರದಿಂದ ಸಾಗಿದ್ದು, ಈಗಾಗಲೆ ಶೇ 50 ರಷ್ಟು ಲಸಿಕೆಯನ್ನು ನೀಡಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಅವಳಿ ತಾಲೂಕಿನ ಬೆಳಗುತ್ತಿ,ತುಗ್ಗಲಹಳ್ಳಿ,ಬಿದರಗಡ್ಡೆ,ಬೇಲಿಮಲ್ಲೂರು,ಕುಳಗಟ್ಟೆ ಹಾಗೂ ಬನ್ನಿಕೋಡು ಗ್ರಾಮಗಳಲ್ಲಿ ನೀಡುತ್ತಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಬಗ್ಗೆ ಮಾಹಿತಿ ಪಡೆದು ಜಾಗೃತಿ ಮೂಡಿಸಿದರು.
ಅವಳಿ ತಾಲೂಕಿನಲ್ಲಿ ಈಗಾಗಲೇ ಶೇ 50 ರಷ್ಟು ಜನರಿಗೆ ಲಸಿಕೆ ನೀಡಲಾಗಿದ್ದು 45 ವರ್ಷ ಮೇಲ್ಪಟ್ಟವರಿಗೆ ಮೊದಲ ಹಾಗೂ ಎರಡನೇ ಡೋಸ್ ಶೇ 98 ರಷ್ಟು ಆಗಿದ್ದು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಅವಳಿ ತಾಲೂಕಿನಲ್ಲಿ ನಮ್ಮ ಗುರಿಯಲ್ಲಿ 50 ರಷ್ಟು ನಾನು ಈಗಾಗಲೇ ಮುಟ್ಟಿದ್ದು ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ಹಾಕಿಸುವ ಕೆಲಸ ಮಾಡಲಾಗುವುದು ಎಂದರು.
ಎರಡನೇ ಅಲೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಸೋಂಕು ಹರಡಿದ್ದರ ಹಿನ್ನೆಲೆಯಲ್ಲಿ ಮೂರನೇ ಅಲೆ ಬರುತ್ತದೆಂದು ಆರೋಗ್ಯ ತಜ್ಞರು ಹೇಳುತ್ತಿದ್ದು ಗ್ರಾಮೀಣ ಭಾಗದ ಜನರು ಎಚ್ಚರಿಕೆಯಿಂದ ಇರುವಂತೆ ಕಿವಿ ಮಾತು ಹೇಳಿದರು.
ಈಗಾಗಲೇ ವಿದ್ಯಾರ್ಥಿಗಳು,ಕೊರೊನಾ ವಾರಿಯರ್ಸಗಳು ಸೇರಿದಂತೆ ಸರ್ಕಾರಿ ನೌಕರರಿಗೂ ಲಸಿಕೆ ನೀಡಿದ್ದು ಹಳ್ಳಿ ಹಳ್ಳಿಗಳಿಗೂ ಲಸಿಕೆ ಪೂರೈಕೆ ಮಾಡುವ ಕೆಲಸ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಅವಳಿ ತಾಲೂಕಿನ ಪ್ರತಿಯೊಬ್ಬರಿಗೂ ಲಸಿಕೆ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಉಮಾಸುರೇಂದ್ರ ಒಡೆಯರ್, ಕೋಡೋಜಿರಾವ್ ಸದಸ್ಯ, ಹಾಲೇಶಪ್ಪ ಕೆ.ಎಂ, ರಾಜಪ್ಪ, ರವಿಕುಮಾರ್, ತಿಪ್ಪೇಶ್ ಸೇರಿದಂತೆ ಆಶಾ ಕಾರ್ಯಕರ್ತರು, ದಾದಿಯರಿದ್ದರು.