ಜಿಲ್ಲೆಯಲ್ಲಿ ಜು.19 ರಂದು 3.54 ಮಿ.ಮೀ ವಾಸ್ತವ ಸರಾಸರಿ
ಮಳೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ರೂ.14.476 ಲಕ್ಷ ಅಂದಾಜು ನಷ್ಟ
ಸಂಭವಿಸಿರುತ್ತದೆ.
ಚನ್ನಗಿರಿಯಲ್ಲಿ 7.98 ಮೀ.ಮೀ ಸರಾಸರಿ ಮಳೆಯಾಗಿದ್ದು,
ದಾವಣಗೆರೆಯಲ್ಲಿ 3.11, ಹರಿಹರ 1.25, ಹೊನ್ನಾಳಿ 1.7, ಜಗಳೂರು 3.66
ಸರಾಸರಿ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 23 ಕಚ್ಚಾ ಮನೆಗಳು
ಭಾಗಶಃ ಹಾನಿಯಾಗಿದ್ದು, ರೂ.1.196 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.
ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ಪೂರ್ಣ ಹಾಗೂ 3 ಪಕಾ
ಮನೆ ಭಾಗಶಃ ಹಾನಿಯಾಗಿದ್ದು, ರೂ.2.48 ಲಕ್ಷ, 7 ಕಚ್ಚಾ ಮನೆ
ಭಾಗಶಃ ಹಾನಿಯಾಗಿದ್ದು ರೂ.3.50 ಲಕ್ಷ ಒಟು ರೂ.5.98 ಲಕ್ಷ ಅಂದಾಜು
ನಷ್ಟ ಸಂಭವಿಸಿರುತ್ತದೆ.

ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 4 ಪಕ್ಕಾ ಮನೆ ಭಾಗಶಃ
ಹಾನಿಯಾಗಿದ್ದು, ರೂ.1.00 ಲಕ್ಷ ಮತ್ತು ಒಂದು ದನದ ಕೊಟ್ಟಿಗೆ
ಹಾನಿಯಾಗಿದ್ದು ರೂ.0.10 ಲಕ್ಷ ಒಟ್ಟು ರೂ.1.10 ಲಕ್ಷ ಅಂದಾಜು ನಷ್ಟ
ಸಂಭವಿಸಿರುತ್ತದೆ.
ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 14 ಪಕ್ಕಾ ಮನೆ ಭಾಗಶಃ
ಹಾನಿಯಾಗಿದ್ದು, ರೂ.6.20 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.
ಈಲ್ಲೆಯಲ್ಲಿ ಒಟ್ಟಾರೆ 14.476 ಲಕ್ಷ ಅಂದಾಜು ನಷ್ಟ
ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ
ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ
ಕಚೇರಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *