ಬೆಂಗಳೂರಿನ ಕೆಂಗೇರಿಯಲ್ಲಿ 2015 ರಲ್ಲಿ ವೀರಶೈವ ಲಿಂಗಾಯತ ರುದ್ರಭೂಮಿ ಉದ್ಘಾಟನೆ ಆಗಿದ್ದರೂ, ಅಲ್ಲಿಗೆ ತೆರಳಲು ಜಾಗದ ಸಮಸ್ಯೆಯಿಂದ ಕಳೆದ 6 ವರ್ಷಗಳಿಂದ ಯಾವುದೇ ಅಂತ್ಯ ಸಂಸ್ಕಾರಕ್ಕೆ ಅವಕಾಶ ಇಲ್ಲದಂತಾಗಿತ್ತು. ಈ ಭಾಗದ ಸಮುದಾಯದವರು ಸುಮಾರು 15 ಕಿಮೀ ದೂರದಲ್ಲಿರುವ ಕನ್ನಲ್ಲಿ ರುದ್ರಭೂಮಿಗೆ ಹೋಗಿ ಅಂತ್ಯಸಂಸ್ಕಾರ ನೆರವೇರಿಸಬೇಕಾಗಿತ್ತು.
ಇಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾದ ಶ್ರೀ ಮಹಾಂತೇಶ್ ಎಂ.ಪಾಟೀಲ್ ಅವರು ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ತಂಡದವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರುದ್ರಭೂಮಿಗೆ ಹೋಗಲು ಸೂಕ್ತ ರಸ್ತೆ ಕಲ್ಪಿಸುವಂತೆ ಸ್ಥಳೀಯ ತಹಶೀಲ್ದಾರ್ ಅವರಿಗೆ ತಿಳಿಸಲಾಯಿತು. ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಅವರು, ಸರ್ವೇ ಕಾರ್ಯ ಮುಗಿದಿದ್ದು, ಪೊಲೀಸ್ ಭದ್ರತೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ರಸ್ತೆ ಕಾರ್ಯ ಆರಂಭ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ರಸ್ತೆ ಕಾಮಗಾರಿ ನಡೆಸುವಾಗ ಸೂಕ್ತ ಭದ್ರತೆ ನೀಡುವಂತೆ ಡಿಸಿಪಿ ಅವರಲ್ಲಿ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜೆ ಮಂಜುನಾಥ್ ಅವರೊಂದಿಗೆ ವಿಷಯದ ಕುರಿತು ಮಾತನಾಡಲಾಯಿತು.