ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳಿಗೆ ಸಣ್ಣ ಹಿಡುವಳದಾರರ ಪತ್ರಗಳನ್ನು ಕೇಳಲಾಗುತ್ತದೆ. ಅನೇಕ ಕುಟುಂಬಗಳು ವಿಭಾಗ ಮಾಡಿಕೊಂಡು ವಾಸ್ತವದಲ್ಲಿ ಸಣ್ಣ ಹಿಡುವಳದಾರರಾಗಿದ್ದರೂ ಅನೇಕ ಕಾರಣಗಳಿಂದ ಜಮೀನುಗಳನ್ನು ವರ್ಗಾವಣೆ ಮಾಡಿಸಿಕೊಂಡಿರುವುದಿಲ್ಲ ಅಥವಾ ಪ್ರಕ್ರಿಯೆಯಲ್ಲಿರುತ್ತಾರೆ.
ತಾಂತ್ರಿಕ ಈ ತೊಡಕಿನಿಂದ ಅಂತಹ ಅರ್ಹ ಫಲಾಮಭವಿಗಳು ಯೋಜನೆಯಿಂದ ಹೊರಗುಳಿ ಯುವುದು ಉಚಿತವಲ್ಲ ಎನ್ನುವುದು ನನ್ನ ಭಾವನೆ.
ಹಾಗಾಗಿ ಸಣ್ಣ ಹಿಡುವಳದಾರರೆಂಬ ಅಫಿಡವಿಟ್, ಗ್ರಾಮಲೆಕ್ಕಿಗರ ದೃಢೀಕರಣ, ಒಂದು ವೇಳೆ ಸಣ್ಣ ಹಿಡುವಳದಾರರಲ್ಲವೆಂದು ಸಾಬೀತಾದಲ್ಲ. ಸರ್ಕಾರದಿಂದ ಪಡೆದ ಸೌಲಭ್ಯವನ್ನು ದಂಡದೊಂದಿಗೆ ವಾಪಾಸ್ಸು ಪಾವತಿಸುವ ಕರಾರುಪತ್ರ ಪಡೆದು ಯೋಜನೆಗಳಿಗೆ ಸೀಮಿತವಾಗಿ ಸಣ್ಣ ಹಿಡುವಳಿದಾರರ ಪತ್ರ ನೀಡಿದಲ್ಲಿ ಅನೇಕ ಬಡಕುಟುಂಬಗಳಿಗೆ ಅನುಕೂಲವಾಗದೆ.
ಹಾಗಾಗಿ ಅರ್ಹ ಫಲಾನುಭವಿಗಳು ಯೋಜನೆಗಳಿಂದ ಹೊರಳಿ ಯದಂತೆ ಅಗತ್ಯ ಸಲಕೆಯನ್ನು ಅಥವಾ ಹೊಸ ನಿಯಮಗಳನ್ನು ಜಾರಿಗೊಳಸಲು ಸೂಕ್ತ ಶಿಫಾರಸ್ಸಿನೊಂದಿಗೆ ಅಗತ್ಯವಿರುವ ವಿವಿಧ ಇಲಾಖೆಗಳ ಸಂಬಂಧಿಸಿದವರ ಗಮನಕ್ಕೆ ತರಬೇಕೆಂದು ಕೊರುವುದರ ಜೊತೆಗೆ .
2015 ರಿಂದ 2021 ರವರೆಗೆ ಜಿಲ್ಲಾ ಪಂಚಾಯಿತಿಯಲ್ಲಿ ಸದಸ್ಯನಾಗಿ ನಿರ್ವಹಿಸಿದ ಜವಾಬ್ದಾಲಿಯೂ ಕೂಡ ಈ ಮನವಿ ಸಲ್ಲಿಸಲು ಕಾರಣವಾಗಿರುತ್ತದೆ .
ಎಂದ ಭದ್ರಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘ ಮಹಾಮಂಡಳದ ನಿರ್ದೇಶಕರಾದ ತೇಜಸ್ವಿನಿ ಪಾಟೀಲ ರವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒತ್ತಾಯ ಮಾಡಿದರು.