ಭಾರತ ದೇಶದ ಪ್ರಜಾಪ್ರಭುತ್ವವನ್ನು ಕತ್ತಲೆಯಲ್ಲಿ ಇಟ್ಟು ಪೆಗಾಸಸ್ ಎಂಬ ಕುತಂತ್ರದ ತಂತ್ರಜ್ಞಾನವನ್ನ ವಿರೋಧ ಪಕ್ಷದ ನಾಯಕರಿಗೆ ಗೌಪ್ಯತೆಯನ್ನು ಪತ್ತೆಹಚ್ಚಿ ವಾಕ್ ಸ್ವಾತಂತ್ರದ ಹಕ್ಕನ್ನು ಕಗ್ಗೊಲೆ ಮಾಡುತ್ತಿರುವ ಮೋದಿ, ಅಮಿತ್ ಶಾ ಕೂಡಲೇ ರಾಜೀನಾಮೆ ಕೊಟ್ಟು ತೊಲಗಬೇಕು ಎಂದು ಆಗ್ರಹಿಸಿ ಪಂಜಿನ ಮೂಲಕ ಪ್ರತಿಭಟನೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಶಾ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಪಂಜಿನ ಮೂಲಕ ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು,
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ಸರಕಾರ ವಿರೋಧ ಪಕ್ಷವನ್ನು ಹಾಗೂ ಪ್ರಜಾಪ್ರಭುತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪತ್ರಿಕೋದ್ಯಮ ಹಾಗೂ ಮಾನವ ಹಕ್ಕು ನ್ಯಾಯಾಂಗ ಸಂಸ್ಥೆಯನ್ನು ಬಿಡದೆ ಪೆಗಾಸಸ್ ಮೂಲಕ ಗೌಪ್ಯತೆ ಕುಸಿಯುತ್ತಿದೆ
ನರೇಂದ್ರ ಮೋದಿ ದುರಾಡಳಿತದಲ್ಲಿ ದೇಶ ಇಂದು ಆರ್ಥಿಕತೆಯಲ್ಲಿ ಕುಸಿಯುತ್ತಿದೆ ಕರೋನ ಎಂಬ ಮಹಾಮಾರಿಯನ್ನು ತಡೆಯಲು ವಿಫಲವಾಗಿದೆ ನಿರುದ್ಯೋಗ ಹೆಚ್ಚುತ್ತಿದೆ ಜಿಡಿಪಿ ಪಾತಾಳಕ್ಕೆ ಕುಸಿದಿದೆ ಈ ಎಲ್ಲದರ ಬಗ್ಗೆ ವಿರೋಧ ಪಕ್ಷಗಳು ಗಟ್ಟಿತನದಿಂದ ಹೋರಾಟ ನಡೆಸುತ್ತಿದೆ ಅದನ್ನು ಹತ್ತಿಕ್ಕಲು ಈ ರೀತಿಯ ವಾಮಮಾರ್ಗದಲ್ಲಿ ಪ್ರತಿಯೊಬ್ಬರ ಗೌಪ್ಯತೆಯನ್ನು ಪತ್ತೆಹಚ್ಚುವ ಇಸ್ರೇಲ್ ಮೂಲದ ಪೆಗಾಸಸ್ ಮೂಲಕ ದೇಶದ ಸಾರ್ವಭೌಮತ್ವವನ್ನು ಕಗ್ಗೊಲೆ ಮಾಡುತ್ತಿದೆ ಮೋದಿ ಸರ್ಕಾರ
ಸ್ವಾತಂತ್ರ ನಂತರದಲ್ಲಿ ಇಂತಹ ಸರ್ವಾಧಿಕಾರಿ ಸರ್ಕಾರ ಕಣ್ಣಾರೆ ಕಾಣಲು ಸಾಧ್ಯವಿಲ್ಲ ಮೋದಿಯ ಅಮಿತ್ ಷಾರ ಈ ಕುತಂತ್ರದ ಆಡಳಿತದಲ್ಲಿ ದೇಶದ ಜನರು ಅವನ ವಾಕ್ ಸ್ವಾತಂತ್ರ ದಿಂದ ಧ್ವನಿ ಎತ್ತಲು ಆಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ
ಈ ಸರ್ವಾಧಿಕಾರಿ ಧೋರಣೆಯ ಪ್ರಧಾನಮಂತ್ರಿ ಗೃಹಸಚಿವರು ದೇಶದಿಂದ ತೊಲಗದೆ ಹೋದರೆ ದೇಶಕ್ಕೆ ಗಂಡಾಂತರ ಕಟ್ಟಿಟ್ಟ ಬುತ್ತಿ ಪ್ರಜಾಪ್ರಭುತ್ವ ಸಂವಿಧಾನ ಯಾವುದಕ್ಕೂ ಬೆಲೆ ಕೊಡದೆ ವಿರೋಧ ಪಕ್ಷವನ್ನು ಹತ್ತಿಕ್ಕಲು ಯಾವ ಮಟ್ಟಕ್ಕಾದರೂ ಈ ಸರ್ಕಾರ ಇಳಿಯುತ್ತದೆ ಎಂಬುದಕ್ಕೆ ಕೇಂದ್ರ ಸರ್ಕಾರದ ಈ ಪೆಗಾಸಸ್ ಎಂಬುವ ಭೂತವೇ ಮೂಲ ಕಾರಣ
ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅಮಿತ್ ಷಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ದೇಶದ ಜನರ ಬಳಿ ಕ್ಷಮೆ ಕೋರಬೇಕು ಇಂತಹ ಕುತಂತ್ರದ ಮೂಲಕ ದೇಶದ ಜನರ ಹಕ್ಕನ್ನು ಕಸಿಯುವ ಪ್ರಯತ್ನವನ್ನು ಕೊನೆಗಾಣಿಸಲು ಕೂಡಲೇ ದೇಶದ ಜನರು ಎಚ್ಚೆತ್ತುಕೊಳ್ಳಬೇಕು ಸರ್ವಾಧಿಕಾರಿ ಸರ್ಕಾರವನ್ನು ತೊಲಗಿಸಲು ಮುಂದಾಗಬೇಕೆಂದು ದೇಶದ ಜನರಲ್ಲಿ ವಿನಂತಿಸಿ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆಯನ್ನು ನಡೆಸಲಾಯಿತು ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖಂಡರಾದ ಎಸ್.ಮನೋಹರ್, ಜಿ. ಜನಾರ್ಧನ್, ಎ.ಆನಂದ್, ಈ. ಶೇಖರ್,ಎಲ್. ಜಯಸಿಂಹ, ಪ್ರಕಾಶ್,ಆದಿತ್ಯ,ಉಮೇಶ್ , ಚಂದ್ರಶೇಖರ್,ಪುಟ್ಟರಾಜು ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು