ನ್ಯಾಮತಿ ಪಟ್ಟಣದ ಕುಂಬಾರಬೀದಿ ಮತ್ತು ಆಂಜನೇಯ ದೇವಸ್ಥಾನ
ಬೀದಿಯವರೆಗೆ 1.17 ಕಿ.ಮೀ. ರಸ್ತೆ ಅಭಿವೃದ್ದಿ. ಹೊನ್ನಾಳಿ, ನ್ಯಾಮತಿ
ಪಟ್ಟಣಗಳು ಮತ್ತು ಸುರಹೊನ್ನೆ ಗ್ರಾಮಗಳ ಪರಿಮಿತಿಯಲ್ಲಿ
ಅಲಂಕಾರಿಕ ವಿದ್ಯುತ್ದೀಪಗಳು, ಹಾಗೂ ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯ
ರಾಜ್ಯ ಹೆದ್ದಾರಿ-48, ರಾಜ್ಯ ಹೆದ್ದಾರಿ-26 ರ ಮುಖ್ಯ ಹೆದ್ದಾರಿ-26 ರ ಮುಖ್ಯ
ರಸ್ತೆಗಳ ಮೀಡಿಯನ್ನಲ್ಲಿ ನ್ಯೂಜೆರ್ಸಿ ಕ್ರ್ಯಾಷ್ ಬ್ಯಾರಿಯರ್ಗಳನ್ನು
ಅಳವಡಿಸುವ ಕಾಮಗಾರಿಗಳಿಗೆ 25 ಕೋಟಿ ರೂ. ಗಳ ಪರಿಷ್ಕøತ ಅಂದಾಜು
ಮೊತ್ತದ ಕಾಮಗಾರಿಗೆ ಜು. 22 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ
ಅನುಮೋದನೆ ನೀಡಲಾಗಿದೆ.
ತಮ್ಮ ಮತ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗೆ
ಅನುಮೋದನೆ ನೀಡಿ, ಸಕಲ ಅಭಿವೃದ್ಧಿಗೆ ಸಹಕರಿಸುತ್ತಿರುವ
ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು,
ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳನವರು ಹಾಗೂ
ಸಂಪುಟದ ಎಲ್ಲ ಸಚಿವರುಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು
ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ
ಕಾರ್ಯದರ್ಶಿಗಳು ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕರಾದ ಎಂ.ಪಿ.
ರೇಣುಕಾಚಾರ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.