ಬಸವನಬಾಗೇವಾಡಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬದಲಾವಣೆ ಕುರಿತಾಗಿ ನಾಡಿನ ಉದ್ದಗಲಕ್ಕೂ ಹಲವಾರು ಊಹಾಪೋಹಗಳು ಹರಿದಾಡುತ್ತಿದ್ದು ಒಂದು ವೇಳೆ ಬದಲಾವಣೆ ಖಚಿತವಾದಲ್ಲಿ ದೀನ ದಲಿತರ ಆಶಾಕಿರಣ ಬಿ. ಶ್ರೀರಾಮುಲು ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಪುಣ್ಯಕೋಟಿ ಆಶ್ರಮದ ವರಲಿಂಲೇಶ್ವರ ಮಹಾಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಂಧ್ರ ಪ್ರದೇಶದ ದಿ. ಮಾಜಿ ಮುಖ್ಯಮಂತ್ರಿ ವೈಎಸ್‌ಆರ್‌ ರಾಜಶೇಖರ ರೆಡ್ಡಿ ಅವರು ಸದಾ ಬಡವರು ದೀನ ದಲಿತರ ಪರವಾಗಿ ಹಲವಾರು ಅಭಿವೃದ್ಧಿ ಯೋಜನೆಗಳ ಮೂಲಕ ಪ್ರತಿಯೊಬ್ಬರ ಮನ ಮನೆಗಳಲ್ಲಿ ನೆಲೆಸಿ ಸಮರ್ಥ ಮುಖ್ಯ ಮಂತ್ರಿಗಳಾಗಿದ್ದರು ಅದೇ ದಾರಿಯಲ್ಲಿ ಕರ್ನಾಟಕದಲ್ಲಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಮ್ಮ ಅಭಿವೃದ್ಧಿ ಪರ ಚಿಂತನೆಗಳ ಮೂಲಕ ಬಡ ದೀನ ದಲಿತರ ಮನ ಮನೆಗಳಲ್ಲಿ ನೆಲೆಸಿದ್ದು ಅಲ್ಲದೆ ಎಲ್ಲ ಸಮುದಾಯದ ರಾಜಕೀಯ ಹೋಗುವ ನಾಯಕರುಗಳನ್ನು ಸಾಮರ್ಥ್ಯವನ್ನು ಒಗ್ಗೂಡಿಸಿಕೊಂಡು ಹೊಂದಿದ್ದಾರೆ. ಬಿಜೆಪಿ ಪಕ್ಷದಲ್ಲಿ ತಮ್ಮ ಸಂಘಟನಾ ಚತುತರೆಯಿಂದ ಬಳ್ಳಾರಿ, ಕೊಪ್ಪಳ, ಗದಗ ಜಿಲ್ಲೆಯಲ್ಲಿ ಭದ್ರ ನೆಲೆ ಒದಗಿಸುವಲ್ಲಿ ಪ್ರಮುಖರಾಗಿದ್ದಾರೆ. ಅವರನ್ನು ಮುಖ್ಯಮಂತ್ರಿಯಾಗಿಸಿದಲ್ಲಿ ರಾಜ್ಯವನ್ನು ಯಶಸ್ವಿಯಾಗಿ ಅಭಿವೃದ್ಧಿ ಪಥದಲ್ಲಿ ಸಾಗಿಸುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದರು.

ಪುಣ್ಯಕೋಟಿ ಆಶ್ರಮದ ವರಲಿಂಲೇಶ್ವರ ಮುಖಂಡರು ಸ್ವಾಮೀಜಿ ಅಭಿಪ್ರಾಯ

ಸ್ವಂತ ಸಾಮಾರ್ಥ್ಯದ ಮೇಲೆ ರಾಜ್ಯದ ಸಾಕಷ್ಟು ಶಾಸಕರನ್ನು ಆಯ್ಕೆಮಾಡಿ ತರುವ ಸಾಮರ್ಥ್ಯವನ್ನು ಬಿ.ಎಸ್.ಯಡಿಯೂರಪ್ಪನವರ ನಂತರದ ಸಾಲಿನಲ್ಲಿ ಬಿ. ಶ್ರೀರಾಮುಲು ಅವರು ನಿಲ್ಲುತ್ತಾರೆ. ಬಿಜೆಪಿ ಪಕ್ಷಕ್ಕೆ ನೆಲೆಯೇ ಇಲ್ಲದ ಹಲವಾರು ಕ್ಷೇತ್ರಗಳಲ್ಲಿ ನೆಲೆಯನ್ನು ಒದಗಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡು ಎಲ್ಲ ಸಮುದಾಯಗಳ ಜನರ ಮೆಚ್ಚುಗೆಗೂ ಕಾರಣರಾಗಿದ್ದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿಯೂ ಇಲಾಖೆಯಲ್ಲಿ ಅಮೂಲಾಗ್ರ ಜನಪರ ಬದಲಾವಣೆಗಳ ಮೂಲಕ ಜನ ಮೆಚ್ಚುಗೆಯ ಸಚಿವರಾಗಿ ಕಾಣಿಸಿಕೊಂಡಿದ್ದರು. ಇತ್ತೀಚಿನ ಬೆಳವಣಿಗೆಗಳಲ್ಲಿ ಕೆಲವೇ ಕೆಲವು ಮುಂದುವರಿದ ಸಮುದಾಯಗಳ ನಾಯಕರನ್ನು ಮುಖ್ಯಮಂತ್ರಿ ಸ್ಥಾನದ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುತ್ತಿರುವದು ಪಕ್ಷದ ಹಿತ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲಿ ಹಿಂದೂಳಿದ ಜನಾಂಗದ ಬಿ. ಶ್ರೀರಾಮುಲು ಅಂತವರನ್ನು ಬಿಂಬಿಸುವಂತಾಗಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *