ದಾವಣಗೆರೆ: ದೇಶದ ಪ್ರಮುಖ ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿದ್ದ ಸಹಕಾರ ಕ್ಷೇತ್ರ ಇಂದು ಗಂಡಾಂತರ ಪರಿಸ್ಥಿತಿಯಲ್ಲಿದ್ದು, ಸಹಕಾರ ಕ್ಷೇತ್ರವನ್ನು ರಕ್ಷಿಸಬೇಕಾದ ಕೇಂದ್ರ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ಸಹಕಾರಿ ಕ್ಷೇತ್ರದ ಮೇಲೆ ಏರುತ್ತಿದೆ ಎಂದು ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‍ಗಳ ಮಹಾಮಂಡಳದ ಅಧ್ಯಕ್ಷರಾದ ಹೆಚ್.ಕೆ.ಪಾಟೀಲ್ ಅವರು ಆಕ್ಷೇಪ ವ್ಯಕ್ತ ಪಡಿಸಿದರು.
ದಿ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‍ನ ಚೌಕಿಪೇಟೆ ಶಾಖೆಯಲ್ಲಿ ನೂತನವಾಗಿ ಆರಂಭಿಸಿದ ಎ.ಟಿ.ಎಂನ್ನು ಉದ್ಘಾಟಿಸಿ ಅವರು ಮಾತನಾಡಿದರು.
1997ರ ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದಂತ ಕಾನೂನು ಸಹಕಾರ ಕ್ಷೇತ್ರವನ್ನು ಉಳಿಸಲಿದೆ. ಆದರೆ ಕೇಂದ್ರ ಸರ್ಕಾರ ಈ ಕಾನೂನು ಜಾರಿಗೆ ತರದೇ ಸಹಕಾರಿ ಕ್ಷೇತ್ರವನ್ನು ಉಳಿಸುತ್ತೇವೆ ಎಂದು ಹೊಸ ಹೊಸ ಕಾನೂನುಗಲನ್ನು ಜಾರಿಗೆ ತರಲು ಹೊರಟಿದ್ದು, ಇಂತಹ ಕಾನೂನುಗಳು ನೀತಿಗಳು ಸಹಕಾರ ಕ್ಷೇತ್ರವನ್ನು ಇನ್ನಷ್ಟು ಅಧಃಪತನಕ್ಕೆ ಕೊಂಡೊಯ್ಯಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದಾವಣಗೆರೆ ಅರ್ಬನ್ ಬ್ಯಾಂಕ್ ಜೊತೆ ನಮ್ಮ ತಂದೆಯವರಾದ ಕೆ.ಹೆಚ್.ಪಾಟೀಲ್ ಅವರು ಉತ್ತಮ ಒಡನಾಟ ಹೊಂದಿದ್ದರು. ಅವರ ಆಶಯದಂತೆ ಬ್ಯಾಂಕ್ ನ್ನು ಉತ್ತಮ ಮಟ್ಟಕ್ಕೆ ಕೊಂಡೊಯುತ್ತಿರುವ ಎಲ್ಲಾ ನಿರ್ದೇಶಕರು, ಸದಸ್ಯರು ಮತ್ತು ಸಿಬ್ಬಂದಿವರ್ಗದವರು ಅಭಿನಂದನಾರ್ಹವೆಂದರು.
ಈ ಹಿಂದೆ ಅನ್ನದಾನ, ಜ್ಞಾನದಾನ ಶ್ರೇಷ್ಟ ಎನ್ನುತ್ತಿದ್ದೇವು. ಆದರೆ ಇಂದು ವ್ಯಾಕ್ಸೀನ್ ದಾನವೂ ಶ್ರೇಷ್ಠವಾಗಿದೆ. ದಾವಣಗೆರೆ ಜನತೆಗೆ ಈ ಹಿಂದೆ ಅನ್ನದಾನ, ಜ್ಞಾನದಾನ ನೀಡಿದ ಶಾಮನೂರು ಶಿವಶಂಕರಪ್ಪನವ


ಶಾಸಕರೂ, ಬಾಪೂಜಿ ಬ್ಯಾಂಕ್ ಅಧ್ಯಕ್ಷರಾದ ಡಾ|| ಶಾಮನೂರು ಶಿವಶಂಕರಪ್ಪನವರು ಮಾತನಾಡಿ ಸರ್ಕಾರಿ ಬ್ಯಾಂಕ್‍ಗಳಲ್ಲಿ ವಹಿವಾಟು ನಡೆಸುವವರು ಸಹಕಾರಿ ಕ್ಷೇತ್ರದಲ್ಲಿ ವಹಿವಾಟು ನಡೆಸಲು ಆಸಕ್ತಿ ಹೊಂದುತ್ತಿಲ್ಲ. ಕೋಟ್ಯಾಂತರ ರೂ ಡಿಪಾಸಿಟ್ ಬಂದರೂ ಸಹ ಸಾಲ ಪಡೆಯದವರ ಸಂಖ್ಯೆ ಕಡಿಮೆ ಆಗುತ್ತಿದ್ದು, ಇದರಿಂದ ಹಲವು ಬ್ಯಾಂಕ್ ಗಳು ಮುಚ್ಚಲು ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್ ಎಂಜೆಬಿ ಮುರುಗೇಶ್ ಅವರು ಸಹಕಾರಿ ಕ್ಷೇತ್ರದ ಸಮಸ್ಯೆಯನ್ನು ಎಳೆ-ಎಳೆಯಾಗಿ ವಿವರಿಸಿ ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಹೆಚ್.ಕೆ.ಪಾಟೀಲ್ ಅವರನ್ನು ವಿನಂತಿಸಿದರು.
ದಾವಣಗೆರೆ ಅರ್ಬನ್ ಬ್ಯಾಂಕ್ ಅಧ್ಯಕ್ಷರಾದ ಕೋಗುಂಡಿ ಬಕ್ಕೇಶಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರೂ, ಶಾಸಕರೂ ಆದ ಪಿ.ಟಿ.ಪರಮೇಶ್ವರನಾಯ್ಕ, ದಾವಣಗೆರೆ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷರಾದ ಅಂದನೂರು ಮುಪ್ಪಣ್ಣ, ನಿರ್ದೇಶಕರುಗಳಾದ ಬಿ.ಸಿ.ಉಮಾಪತಿ, ಮತ್ತಿಹಳ್ಳಿ ವೀರಣ್ಣ, ಪಲ್ಲಾಗಟ್ಟೆ ಶಿವಾನಂದಪ್ಪ, ಕಂಚಿಕೆರೆ ಮಹೇಶ್, ಅಜ್ಜಂಪುರ ಶೆಟ್ರು ವಿಜಯಕುಮಾರ್, ಎಂ.ಚಂದ್ರಶೇಖರ್, ಇ.ಎಂ.ಮಂಜುನಾಥ್, ಶ್ರೀಮತಿ ಸುರೇಖಾ ಎಂ ಚಿಗಟೇರಿ, ಬೆಳ್ಳೂಡಿ ಮಂಜುನಾಥ್, ಎಂ.ದೊಡ್ಡಪ್ಪ, ಟಿ.ಎಸ್.ಜಯರುದ್ರೇಶ್, ಜಂಬಗಿ ರಾಧೇಶ್, ಪ್ರಧಾನ ವ್ಯವಸ್ಥಾಪಕರಾದ ಡಿ.ವಿ.ಆರಾಧ್ಯಮಠ್, ಉಪ ಪ್ರಧಾನ ವ್ಯವಸ್ಥಾಪಕರಾದ ಬಿ.ಎಸ್.ಮಲ್ಲೇಶ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *