ಶಿಶುಗಳ ಅಪೌಷ್ಠಿಕತೆಯ ಹಣದಲ್ಲೂ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಶಾಸಕ ಪರಣ್ಣ ಮನವಳ್ಳಿ ಲಂಚ ಪಡೆದಿರುವ ಹಿನ್ನೆಲೆಯಲ್ಲಿ ರಾಜೀನಾಮೆ ಕೊಟ್ಟು ತೊಲಗಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಜೊಲ್ಲೆ ಹಾಗೂ ಬಿಜೆಪಿ ಶಾಸಕ ಪರಣ್ಣ ಮನವಳ್ಳಿ ಪ್ರತಿಕೃತಿ ದಹಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಮನೋಹರ್ ಅವರು ಬಿಜೆಪಿ ಸರ್ಕಾರ ಮಂತ್ರಿಗಳು ಮಕ್ಕಳ ಅಪೌಷ್ಠಿಕತೆಗೆ ಮೀಸಲಿಟ್ಟ ಯೋಜನೆಗಳಲ್ಲೂ ಲೂಟಿ ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ದೇಶದ ಇತಿಹಾಸದಲ್ಲೇ ಇಂತಹ ಭ್ರಷ್ಟಾಚಾರದ ಸರ್ಕಾರವನ್ನ ಕಣ್ಣಾರೆ ಕಾಣಲು ಸಾಧ್ಯವಿಲ್ಲ ಕೂಡಲೇ ಈ ಭ್ರಷ್ಟಾಚಾರ ಸರ್ಕಾರ ರಾಜ್ಯದಿಂದ ತೊಲಗಬೇಕು ತೊಲಗದೆ ಜನರ ಹಣವನ್ನು ಲೂಟಿ ಹೊಡೆಯುವ ಮೂಲಕ ಜನರ ಜೀವನಕ್ಕೆ ಮುಳುವಾಗುತ್ತಾರೆ ಕೂಡಲೇ ಇವರನ್ನು ವಜಾಗೊಳಿಸಿ ಬಂಧಿಸಬೇಕೆಂದು ಪ್ರತಿಭಟನೆ ನಡೆಸಲಾಯಿತು.ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಎಸ್.ಮನೋಹರ್, ಎಂ. ಎ. ಸಲೀಮ್, ಜಿ.ಜನಾರ್ಧನ,ಎ.ಆನಂದ್ ಕೆ.ಟಿ. ನವೀನ್, ಪುಟ್ಟರಾಜು, ಚಂದ್ರಶೇಖರ್, ಸುರೇಶ್, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *