: ಶ್ರೀರಾಮುಲು ಡಿಸಿಎಂ ಕನಸು ನನಸಾಗುವುದೇ?
ಬಳ್ಳಾರಿ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಾಯಕತ್ವ ಬದಲಾವಣೆಯ ಬಿಸಿ ತಾರಕ್ಕೇರಿರುವ ಬೆನ್ನಲ್ಲೇ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲುರವರು ದೆಹಲಿಗೆ ಹೋಗಿಬಂದಿರುವ ಸುದ್ದಿ ಗಣಿ ನಾಡಿನ ಬಿಜೆಪಿ ವಲಯದಲ್ಲಿ ಹೊಸ ಹುರುಪನ್ನು ಉಂಟು ಮಾಡಿದೆ.
ಬಿ.ಶ್ರೀರಾಮುಲುರವರ ಬಹುದಿನಗಳ ಕನಸಾದ ಡಿಸಿಎಂ ಹುದ್ದೆ ಅವರ ಕೈಗೆಟಕುವ ಸಮಯ ಸನಿಹಕ್ಕೆ ಬಂದಿದೆಯಾ? ಎಂಬ ಚರ್ಚೆ ಜಿಲ್ಲೆಯಲ್ಲಿ ಆರಂಭವಾಗಿದೆ. ಬಿಜೆಪಿ ಪಕ್ಷದ ಸ್ಟಾರ್ ನಾಯಕರಲ್ಲಿ ಒಬ್ಬರಾದ ಶ್ರೀರಾಮುಲು ಜಿಲ್ಲೆ, ಸಮುದಾಯಗಳ ಎಲ್ಲೆ ಮೀರಿ ರಾಜ್ಯ ಮಟ್ಟದ ನಾಯಕರಾಗಿದ್ದರೂ ಸಹಿತ ಇತ್ತೀಚೆಗೆ ಬಿಎಸ್‌ವೈ ಆಡಳಿತದಲ್ಲಿ ತಮ್ಮ ವರ್ಚಸ್ಸು ಕಳೆದುಕೊಳ್ಳುತ್ತಿದ್ದಾರಾ? ಎಂಬ ಪ್ರಶ್ನೆ ಮೂಡಿತ್ತು. ರಾಜ್ಯ ರಾಜಕಾರಣದ ಕಳೆದ ಎರಡು ವರ್ಷಗಳ ವಿದ್ಯಮಾನ ಇದಕ್ಕೆ ಇಂಬನ್ನು
ಪ್ರಭಾವಿ ನಾಯಕ ಶ್ರೀರಾಮುಲು
ಶ್ರೀರಾಮುಲು ಅವರು ವಾಲ್ಮೀಕ ನಾಯಕ ಸಮುದಾ ಯದ ಪ್ರಮುಖ ಮುಖಂಡ. ಕಳೆದ ವಿಧಾನ ಸಭಾ ಚುನಾವಣೆ ಯಲ್ಲಿ ಕೂಡಾ ಹಲವು ಬಿಜೆಪಿ ಅಭ್ಯರ್ಥಿಗಳನ್ನು ಶಾಸಕರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಹಿಂದುಳಿದ ಸಮುದಾಯದಿಂದ ಬಂದು ರಾಜಕೀಯವಾಗಿ ಪ್ರವರ್ಧ ಮಾನಕ್ಕೆ ಬಂದಿರುವ ಶ್ರೀರಾಮುಲು,ಸಮುದಾಯ ಹಾಗೂ ಜಿಲ್ಲೆಗಳ ಗಡಿ ದಾಟಿ ಬೆಳೆದಿದ್ದಾರೆ. ಬದಾಮಿಯಲ್ಲಿ ಮಾಜಿ ಮುಖ್ಯ ಮಂತ್ರಿಗೆ ತೀವ್ರ ಸ್ಪರ್ಧೆ ನೀಡಿ, ಅತ್ಯಂತ ಕಡಿಮೆ ಅಂತರ ದಲ್ಲಿ ಪರಾಭವಗೊಂಡರೂ, ರಾಜ್ಯ ಮಟ್ಟದ ನಾಯಕರಾಗಿ ತಾವು ಬೆಳೆದಿರುವ ಪರಿಯನ್ನು ಆ ಮೂಲಕ ತೋರಿಸಿದರು.
ಎಂದೆನ್ನಬಹುದು.ಶ್ರೀರಾಮುಲುರವರಿಗೆ ಡಿಸಿಎಂ ಹುದ್ದೆ ದೊರೆತರೇ ಕಲ್ಯಾಣ ಕರ್ನಾಟಕದ ಸೂಕ್ತ ಪ್ರಾತಿನಿಧ್ಯವಾದಂ ತಾಗುತ್ತದೆ ಎಂಬುದು ಅವರ ಬೆಂಬಲಿಗರ ಬಹುದಿನಗಳ ಆಗ್ರಹ ವಾಗಿದೆ.ಸುಮಾರು ಎರಡು ದಶಕಗಳ ರಾಜಕೀಯ ಜೀವನ ದಲ್ಲಿ ಯಾವುದೇ ವಿವಾದ,ಹಗರಣಗಳಲ್ಲಿ ಸಿಲುಕಿಕೊಳ್ಳದೇ, ಎಲ್ಲಾ ಸಮುದಾಯದವರನ್ನು ಒಟ್ಟಿಗೆ ಕೆರೆದುಕೊಂಡು ಮುಂದೆ ಸಾಗುವ ನಾಯಕರಾಗಿರುವ ಶ್ರೀರಾಮುಲುರವರಿಗೆ ಡಿಸಿಎಂ ಹುದ್ದೆ ಯಾವಾಗಲೋ ಸಿಗಬೇಕಾಗಿತ್ತು.ಈಗಲಾದರೂಸಿಗಲಿ ಎಂಬುದು ಅವರ ಬೆಂಬಲಿಗರ ಹಾಗೂ ಸಾಮಾನ್ಯ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯವಾಗಿದೆ
ಬಿಎಸ್ ಯಡಿಯೂರಪರವರ ಪದಚ್ಯುತಿ ಆಗಬಹುದು ಎಂಬ ಮಾತು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಶ್ರೀರಾಮುಲುರವರ ದೆಹಲಿ ಪ್ರವಾಸ ಅವರ ಅಭಿಮಾನಿಗಳಲ್ಲಿ ಹಾಗೂ ಪಕ್ಷದ ಸಾಮಾನ್ಯ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದ್ದೂ, ಡಿಸಿಎಂ ಹುದ್ದೆ ಈ ಬಾರಿ ಬಳ್ಳಾರಿಗೆ ಲಭಿಸಲಿದೆ ಎಂಬ ಉಮೇದಿನಲ್ಲಿ ಅವರಿದ್ದಾರೆ.
ಬಿಜೆಪಿ ಪಕ್ಷದ ರಾಷ್ಟ್ರೀಯ ವರಿಷ್ಠರ ಕರೆಯ ಮೇಲೆ ದೆಹಲಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿ ಬುಧವಾರ ನಸುಕಿನ ಜಾವಕ್ಕೆ ವಿಮಾನವೇರಿದ ಶ್ರೀರಾಮುಲು ರವರು ಮುಖಂಡರ ಭೇಟಿ ಮಾಡಿ ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ. ದೆಹಲಿ ಭೇಟಿಯ ಕುರಿತು ಇದುವರೆಗೂ ಯಾವುದೇ ಹೇಳಿಕೆ ನೀಡದಿರುವ ಶ್ರೀರಾಮುಲುರವರು, ವರಿಷ್ಠರು ತಮ್ಮ ಕುರಿತು ಉತ್ತಮ ಒಳ್ಳೆಯ ನಿರ್ಣಯ ಕೈಗೊಳ್ಳಲಿದ್ದಾರೆ ಎಂಬ ಆಶಾವಾದಲ್ಲಿದ್ದಾರೆ ಎಂದು ಅವರ ಆಪ್ತ ವಲಯ ಪತ್ರಿಕೆಗೆ ತಿಳಿಸಿದ್ದಾರೆ.
ನೀಡಿದ್ದ ಭರವಸೆಯನ್ನು ಉಳಿಸಿಕೊಂಡಿರಲಿಲ್ಲ
ಬಜೆಪಿ ಅಧಿಕಾರಕ್ಕೆ ಬಂದರೆ ಶ್ರೀರಾಮುಲು ರವರಿಗೆ ಡಿಸಿಎಂ ಹುದ್ದೆ ನೀಡುವ ಭರವಸೆಯನ್ನು 2018 ರಲ್ಲಿ ಪಕ್ಷದ ಹೈಕಮಾಂಡ್ ನೀಡಿತ್ತಾದರೂ, ಅದು ನನಸಾಗಿರಲಿಲ್ಲ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ರಾಜ್ಯಾದ್ಯಾಂತ ಕಾಳಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ಮಾಡಿದ್ದರು ಶ್ರೀರಾಮುಲು. ಬಹುಮತ ದೊರಕದ ಕಾರಣ ಹೆಚ್ಚು ಕಡಿಮೆ ಅಧಿಕಾರದಿಂದ ಹೊರಗುಳಿದಿದ್ದ ಬಿಜೆಪಿ ಆಪರೇಷನ್ ಕಮಲದ ಆಸರೆ ಮೇಲೆ ಅಧಿಕಾರಕ್ಕೆ ಬಂದರೂ ಶ್ರೀರಾಮುಲು ಕೇವಲ ಆರೋಗ್ಯ ಕಲ್ಯಾಣ ಖಾತೆಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಮೂರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ರಚಿಸಿದರೂ ಶ್ರೀರಾಮುಲುರವರಿಗೆ ಡಿಸಿಎಂ ಹುದ್ದೆ ವಂಚಿತರಾಗಲೂ ವಲಸೆ ಬಂದ ಮಿತ್ರ ಮ೦ಡಳಿಯಲ್ಲಿದ್ದ ರಮೇಶ್ ಜಾರಕಿಹೊಳಿ ಅವರ ಸಮುದಾಯಕ್ಕೆ ಸೇರಿದವರಾಗಿದ್ದುದೇ ಕಾರಣ ಎಂಬ ಮಾತು ಆಗ ಕೇಳಿಬಂದಿತ್ತು.
ತದನಂತರ ಆರೋಗ್ಯ ಸಚಿವ ಸ್ಥಾನದಿಂದ ಸಮಾಜಕಲ್ಯಾಣ ಸಚಿವರನ್ನಾಗಿ ಮಾಡಿದಾಗಲೂ ಕೂಡ ಶ್ರೀರಾಮುಲು ಬೆಂಬಲಿಗರಲ್ಲಿ ಅಸಮಾಧಾನ ಮೂಡಿತ್ತು ಪದೇಪದೇ ತಮ್ಮ ನಾಯಕರಿಗೆಶಅನ್ಯಾಯವಾಗುತ್ತದೆ ಎಂದು ಭಾವನೆ ಮೂಡಿದರೆ ಅದು ಅಸಹಜವಲ್ಲ.
ಬದಲಾದ ರಾಜಕೀಯ ಸಂದರ್ಭ
ಈಗಿನ ಪ್ರಸ್ತುತ ಬಿಎಸ್ವೈ ಕೊಚ್ಚಿ ಹೋಗುತ್ತಿರುವ ಸಂದರ್ಭದಲ್ಲಿ ಶ್ರೀರಾಮುಲು ಅವರು ಕನಸಿಗೆ ರೆಕ್ಕೆ ಮೂಡಿದಂತಿದೆ ಸಿಎಂ ಬದಲಾವಣೆಯೊಂದಿಗೆ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬಂದ ನಾಯಕರ ಭವಿಷ್ಯ ಅತಂತ್ರವಾಗಿದೆ ಒಂದು ವೇಳೆ ಸಿಎಂ ಬದಲಾದರೆ ಇವರ ಸ್ಥಾನಮಾನ ಮೊದಲಿನಷ್ಟು ಪ್ರಭಾವಶಾಲಿಯಾಗಿ ಇರುವುದು ಅನುಮಾನ ಈ ಬದಲಾದ ರಾಜಕೀಯ ಸಂದರ್ಭದಲ್ಲಿ ಶ್ರೀರಾಮುಲು ಅವರ ಬಹುದಿನದ ಕನಸಾದ ಡಿಸಿಎಂ ಹುದ್ದೆಗೆ ಅವರಿಗೆ ಲಭಿಸಬಹುದು ಎಂಬ ಎಂಬ ವಾದ ರಾಜಕೀಯ ವಿಶ್ಲೇಷಕರು ಮಾಡುತ್ತಿದ್ದಾರೆ.
ಆರ್ ಎಸ್ ಎಸ್ ನ ದಲಿತ ಸಿಎಂ ಅಜೆಂಡಾ
ಆರೆಸ್ಸೆಸ್ ರಾಜ್ಯದಲ್ಲಿ ದಲಿತ ಸಿಎಂ ಮಾಡುವ ಅಜೆಂಡಾವನ್ನು ಹೊಂದಿದ್ದು ಅದನ್ನು ಕಾರ್ಯರೂಪಕ್ಕೆ ತರುವ ಉತ್ಸಾಹದಲ್ಲಿದೆ ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಎಸ್ವೈ ಮಾಡಿದರೆ ರಾಜಕೀಯವಾಗಿ ಪ್ರಬಲವಾಗಿರುವ ಲಿಂಗಾಯತ ಸಮುದಾಯದ ಕೋಪವನ್ನು ಲಿಂಗಾಯತ ಸಮುದಾಯದವರಲ್ಲೇ ಮತ್ತೋರ್ವ ನಾಯ್ಕನನ್ನು ಸಿಎಂ ಮಾಡುವ ಸಾಧ್ಯತೆ ಹೆಚ್ಚಾಗಿದೆ ಆರ್ ಎಸ್ ಎಸ್ ನ ಇಚ್ಛೆಯಂತೆ ದಲಿತರನ್ನು ಸಿಎಂ ಮಾಡುವ ಉದ್ದೇಶದಿಂದ ಶ್ರೀರಾಮುಲು ಅವರನ್ನು ದೆಹಲಿಗೆ ಕರೆಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದರೂ ಸಾಧ್ಯತೆ ಇಲ್ಲ ಎಂದು ಅನಿಸುತ್ತಿದೆ.
ಮೃದುಭಾಷಿ ಶ್ರೀರಾಮುಲು ರವರು ರಾಜಕೀಯ ಹಿನ್ನೆಲೆ ಪ್ರಭಾವ ಹಾಗೂ ಪಕ್ಷಕ್ಕೆ ಅವರ ಸೇವೆಯನ್ನು ನೋಡಿ ಈ ಬಾರಿ ಬಿಜೆಪಿ ಹೈಕಮಾಂಡ್ ರವರಿಗೆ ಡಿಸಿಎಂ ಹುದ್ದೆ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಆಶಾಭಾವನೆ ಯಲ್ಲಿದ್ದಾರೆ