ಸಾಸ್ವೆಹಳ್ಳಿ : ಪತ್ರಿಕಾ ದಿನಚರಣೆಗಳು ವರ್ಷಕ್ಕೊಮ್ಮೆ ನೆನಪಿಸುವ
ಕಾರ್ಯಕ್ರಮ ಮಂಗಳೂರು ಸಮಾಚಾರ ಪತ್ರಿಕೆ ಕನ್ನಡದ
ಪ್ರಥಮ ದಿನ ಪತ್ರಿಕೆಯಾಗಿತ್ತು. ಅದರ ನೆನಪಿಗಾಗಿ ಪ್ರತಿ ವರ್ಷ
ಪತ್ರಿಕಾ ದಿನಚರಣೆ ಕಾರ್ಯಕ್ರಮ ನಡೆಸುವ ಜೊತೆಗೆ
ಪತ್ರಕರ್ತರು ಜ್ಞಾನ, ವಿಸ್ತಾರವನ್ನು ಹೆಚ್ಚಿಸಿಕೊಳ್ಳಲು
ಸಹಕಾರಿಯಾಗಬೇಕು ಹಾಗೂ ಬದಲಾಗುತ್ತಿರುವ ತಾಂತ್ರಿಕತೆಗಳಿಗೆ
ಅಪ್‍ಡೇಟ್ ಆಗಬೇಕೆಂದು ಶಿವಮೊಗ್ಗದ ಕನ್ನಡ ಮಿಡಿಯಂ 27×7 ವಾಹಿನಿಯ
ಪ್ರಧಾನ ಸಂಪಾದಕ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.
ಕರ್ನಾಟಕ ಪತ್ರಕರ್ತರ ಸಂಘ ಹೊನ್ನಾಳಿ ಮತ್ತು ನ್ಯಾಮತಿ
ತಾಲ್ಲೂಕು ಘಟಕದಿಂದ ಭಾನುವಾರ ಗೋವಿನಕೋವಿ ಗ್ರಾಮದ ಶ್ರೀ
ಹಾಲಸ್ವಾಮಿ ಬೃಹನ್ಮಠದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ
ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಆಧುನಿಕ
ಪರಿಕರಗಳು ಬಳಕೆ ಹಾಗೂ ದುರ್ಬಳಕೆ ವಿಷಯವಾಗಿ ಉಪನ್ಯಾಸ
ನೀಡಿದರು. ಎಲೆಕ್ಟ್ರಾನಿಕ್ ಮೀಡಿಯಾಗಳು ಬೆಳೆದು ನಿಂತಿದ್ದು ಇಡೀ ಜಗತ್ತಿನ
ವಿದ್ಯಮಾನಗಳು ಕೈ ಬೆರಳಿನ ತುದಿಗೆ ಬಂದು ನಿಂತಿವೆ ಎಂದು ಹೇಳಿದರು.
ನ್ಯಾಮತಿ ಪೋಲೀಸ್ ಸಬ್‍ಇನ್ಸ್‍ಸ್ಪೆಕ್ಟರ್ ಪಿ.ಎಸ್. ರಮೇಶ್ ಮಾತನಾಡಿ
ಎಲೆಕ್ಟ್ರಾನಿಕ್ ಮಾಧ್ಯಮಗಳಿಗಿಂತ ಪತ್ರಿಕೆಗಳು ಹೆಚ್ಚು ವಿಶ್ವಾಸನೀಯ
ಸುದ್ದಿಗಳನ್ನ ಹೊಂದಿವೆ ಪತ್ರಕರ್ತರಿಗೆ ಸುದ್ದಿ ಬಗ್ಗೆ ವಿಶ್ಲೇಷಿಸಲು
ಸಮಯವಿರುತ್ತದೆ ಎಂದು ಹಾಗೂ ಈಗಿನ ಯುವಕರು ಪತ್ರಿಕೆಗಳ
ಓದುವ ಹವ್ಯಾಸವನ್ನ ಬೆಳೆಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಪತ್ರಕರ್ತರ ಸಂಘದ
ಅಧ್ಯಕ್ಷ ಹಾಲೇಶಪ್ಪ ಎ.ಕೆ. ಮಾತನಾಡಿ ಪತ್ರಿಕೆಗಳು ಎಲ್ಲಾ ಏಳು
ಬೀಳುಗಳ ಮಧ್ಯೆ ಕನ್ನಡ ಪತ್ರಿಕಾ ರಂಗ ಇದೀಗ
ಒಂದೂಮುಕ್ಕಾಲು ಶತಮಾನ ದಾಟಿ ಮುನ್ನಡೆಯುತ್ತಿರುವುದು
ಸಾಧನೆಯಾಗಿದೆ. ಪತ್ರಕರ್ತರು ತಮ್ಮ ಸುತ್ತಮುತ್ತಲು
ನಡೆಯುವ ಸಭೆ ಸಮಾರಂಭ ಅಹಿತಕರ ಘಟನೆಗಳು ವಿಶೇಷ
ಸುದ್ದಿಗಳನ್ನ ಮಾಡಲು ಅವರು ಸಹ ಶ್ರಮ ಹಾಕಿ ಜ್ಞಾನವನ್ನ ಹೊರೆ
ಹಚ್ಚಬೇಕಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯ arun
ಮಾಸಡಿ,shakil ahamd, ಆರ್.ಟಿ.ಐ. ಕಾರ್ಯಕರ್ತ ಮಹೇಂದ್ರಕರ್, ಆಯುಷ್ ಇಲಾಖೆಯ
ವೈದ್ಯ ಡಾ. ಲಿಂಗರಾಜೇಂದ್ರ, ಶ್ರೀ ಹಾಲಸ್ವಾಮಿ ಬೃಹನ್ಮಠದ ಅಭಿವೃದ್ಧಿ
ಸಮಿತಿಯ ಅಧ್ಯಕ್ಷ ಎಸ್.ಇ. ರಮೇಶ್, ಗೃಹರಕ್ಷಕ ದಳದ ಮೊಳೆಕರ್
ಮಾತನಾಡಿದರು, ಮಠದ ಅಭಿವೃದ್ಧಿ ಸಮಿತಯ ಗೌರವಾಧ್ಯಕ್ಷ ಎಚ್.
ಪಾಲಾಕ್ಷಪ್ಪ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಪ್ರಧಾನ
ಕಾರ್ಯದರ್ಶಿ ಡಿ.ಎಂ. ಹಾಲಾರಾಧ್ಯ ಮಾತನಾಡಿದರು.

Leave a Reply

Your email address will not be published. Required fields are marked *