ಹಾವೇರಿ: ಬಿಇಒ ಕಚೇರಿ ಮ್ಯಾನೇಜರ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಶಿಗ್ಗಾವಿಯಲ್ಲಿ ನಡೆದಿದೆ. ಬಿಇಒ ಕಚೇರಿಯ ಸುರೇಶ ಗಿರೆಪ್ಪ ರೊಡ್ಡಣ್ಣವರ ಎಸಿಬಿ ಬಲೆಗೆ ಬಿದ್ದ ಮ್ಯಾನೇಜರ್ ಆಗಿದ್ದಾರೆ.

ಸುರೇಶ್ ವರ್ಗಾವಣೆಗೆ ಸಂಬಂಧಿಸಿದಂತೆ ಶಿಕ್ಷಕರೊಬ್ಬರಿಂದಲೇ 4 ಸಾವಿರ ಹಣದ ಬೇಡಿಕೆಯನ್ನಿಟ್ಟಿದ್ದರು. ಈ ಕುರಿತಂತೆ ಶಿಕ್ಷಕ ಹನುಮಂತಪ್ಪ ಹಳ್ಳೆಪ್ಪನವರ ಎಸಿಬಿಗೆ ದೂರು ನೀಡಿದ್ದರು. ಮುಂಚಿತವಾಗಿ ಒಂದು ಸಾವಿರ ರೂಪಾಯಿ ಹಣವನ್ನು ಶಿಕ್ಷಕರಿಂದ ಪಡೆದು ಇನ್ನುಳಿದ 3 ಸಾವಿರ ರೂಪಾಯಿ ಪಡೆಯುತ್ತಿರುವ ಸಂದರ್ಭದಲ್ಲಿ ದಾವಣಗೆರೆ ಭ್ರಷ್ಟಾಚಾರ ನಿಗ್ರಹ ದಳ ತಂಡಕ್ಕೆ ಇಂದು ಸಿಕ್ಕಿಬಿದ್ದಿದ್ದಾರೆ.

ದಾವಣಗೆರೆ ವಲಯದ ಎಸಿಬಿ ಎಸ್ಪಿ ಜಯಪ್ರಕಾಶ ನೇತೃತ್ವದಲ್ಲಿ ಡಿವೈಎಸ್ಪಿ ಮಹಾಂತೇಶ ಜಿದ್ದಿ, ಇನ್ಸ್ಪೆಕ್ಟರ್ ಗಳಾದ ಎಸ್.ಕೆ. ಪಟ್ಟಣಕೂಡಿ, ಪ್ರಭಾವತಿ ಶೇಖವಡಿ, ಸಿಬ್ಬಂದಿಗಳಾದ ಬಿ.ಎಸ್. ಕರಡಣ್ಣವರ, ಕಡಕೋಳ, ಅಗಸಿಕೆರಿ ವೆಂಕಟೇಶ ಹುಲಿಹಳ್ಳಿ, ಮಂಜುನಾಥ, ಮೂಲಿಮನಿ ಕಾಂಬಳೆ, ಬಸಪ್ಪ ಕಾರ್ಯಾಚರಣೆಯಲ್ಲಿ ಇದ್ದರು.

Leave a Reply

Your email address will not be published. Required fields are marked *