ಬಸವರಾಜ ಬೊಮ್ಮಾಯಿ ಇವರ ವ್ಯಕ್ತಿ ಪರಿಚಯ…

ಜನನ : 28-01-1960

ಜನ್ಮ ಸ್ಥಳ : ಹುಬ್ಬಳ್ಳಿ

ತಂದೆ : ಎಸ್.ಆರ್.ಬೊಮ್ಮಾಯಿ (ರಾಜ್ಯದ ಮಾಜಿ ಮುಖ್ಯಮಂತ್ರಿ / ಕೇಂದ್ರದ ಮಾಜಿ ಸಚಿವ / ಅಧ್ಯಕ್ಷರು, ರಾಷ್ಟ್ರೀಯ ಜನತಾ ದಳ)

ತಾಯಿ : ಗಂಗಮ್ಮ ಎಸ್. ಬೊಮ್ಮಾಯಿ

ಧರ್ಮಪತ್ನಿ: ಚನ್ನಮ್ಮಾ ಬಿ. ಬೊಮ್ಮಾಯಿ

ಮಕ್ಕಳು : ಪುತ್ರ – ಭರತ, ಪುತ್ರಿ – ಆದಿತಿ

ಪ್ರಾಥಮಿಕ ವಿದ್ಯಾಭ್ಯಾಸ : ರೋಟರಿ ಇಂಗ್ಲೀಷ ಮಾದ್ಯಮ ಶಾಲೆ, ದೇಶಪಾಂಡೆ ನಗರ, ಹುಬ್ಬಳ್ಳಿ.

ಮಾಧ್ಯಮಿಕ ವಿದ್ಯಾಭ್ಯಾಸ : ರೋಟರಿ ಇಂಗ್ಲೀಷ ಮಾದ್ಯಮ ಶಾಲೆ, ದೇಶಪಾಂಡೆ ನಗರ, ಹುಬ್ಬಳ್ಳಿ.

ಪಿ.ಯು.ಸಿ: ಪಿ.ಸಿ.ಜಾಬಿನ ವಿಜ್ಞಾನ ಮಹಾವಿದ್ಯಾಲಯ, ಹುಬ್ಬಳ್ಳಿ.

ಇಂಜನೀಯರಿಂಗ್ ವಿದ್ಯಾಭ್ಯಾಸ (ಮೆಕ್ಯಾನಿಕಲ್)
: ಬಿ.ವ್ಹಿ.ಭೂಮರಡ್ಡಿ ತಾಂತ್ರಿಕ ಮಹಾವಿದ್ಯಾಲಯ, ಹುಬ್ಬಳ್ಳಿ.

ಪ್ರಾರಂಭದ ಉದ್ಯೋಗ: ಕೈಗಾರಿಕಾ ಉದ್ಯಮಿ ಹಾಗೂ 1983 ರಿಂದ 1985 ರವರೆಗೆ ಪುಣೆ ಟೆಲ್ಕೋ ಕಂಪನಿಯಲ್ಲಿ ಎರಡು ವರ್ಷಗಳ ತಾಂತ್ರಿಕ ತರಬೇತಿ

ಉದ್ಯೋಗ ಸ್ಥಾಪನೆ: ಹುಬ್ಬಳ್ಳಿ ಹಾಗೂ ಬೆಂಗಳೂರು.

ಸಾಮಾಜಿಕ ಹಾಗೂ ರಾಜಕೀಯ ಸೇವೆ : ಕಾಲೇಜ್ ವಿದ್ಯಾಭ್ಯಾಸ ದಿನದಿಂದಲೇ ಸಾಮಾಜಿಕ ಹಾಗೂ ರಾಜಕೀಯ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹಾಗೂ ಸಂಘಟನೆಗಳಿಗೆ ಸತತ ಪ್ರಯತ್ನ

:2007 ರಲ್ಲಿ ಜುಲೈನಲ್ಲಿ ಧಾರವಾಡದಿಂದ ನರಗುಂದವರೆಗೆ 232 ಕಿ.ಮೀ 21 ದಿನಗಳ ಬೃಹತ್ ರೈತರೊಂದಿಗೆ ಪಾದಯಾತ್ರೆ.

: 1993 ರಲ್ಲಿ ಹುಬ್ಬಳ್ಳಿ ನಗರದಲ್ಲಿ ನಡೆದ ರಾಜ್ಯ ಯುವಜನತಾ ದಳದ ಐತಿಹಾಸಿಕ ಬೃಹತ್ ರ್ಯಾಲಿಯ ಸಂಘಟನೆಯ ನೇತೃತ್ವ.

: 1995 ರಲ್ಲಿ ಹುಬ್ಬಳ್ಳಿ ನಗರದ ಈದಗಾ ಮೈದಾನದ ಸಮಸ್ಯೆಯ ಶಾಸ್ವತ ಪರಿಹಾರಕ್ಕೆ ರಾಜ್ಯ ಸರ್ಕಾರದ ಮೂಲಕ ಪ್ರಯತ್ನ / ನೇತೃತ್ವ.

ಪಕ್ಷದಲ್ಲಿ ಸ್ಥಾನ

1995 ರಲ್ಲಿ ರಾಜ್ಯದ ಜನತಾದಳ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

ರಾಜಕೀಯ ಸ್ಥಾನಮಾನ
: 1996 ರಿಂದ 1997 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ಇವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ

: 31-12-1997 ಹಾಗೂ 04-12-2003 ರಲ್ಲಿ ರಾಜ್ಯ ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ (ಧಾರವಾಡ-ಹಾವೇರಿ-ಗದಗ) ನಡೆದ ಚುನಾವಣೆಯಲ್ಲಿ ಸತತ ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆ.

22-05-2008 ರಂದು ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವ ವಿಧಾನಸಭೆ ಮತಕ್ಷೇತ್ರದಿಂದ ಆಯ್ಕೆ

ರಾಜ್ಯದ ಹಿಂದಿನ ಬಿ.ಜೆ.ಪಿ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ / ಡಿ.ವ್ಹಿ.ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ಇವರ ಸಚಿವ ಸಂಪುಟದಲ್ಲಿ ಸತತ ಐದು ವರ್ಷಗಳವರೆಗೆ ಜಲ ಸಂಪನ್ಮೂಲ ಸಚಿವರಾಗಿ ಸೇವೆ.

ದಿನಾಂಕ : 05-05-2013 ರಂದು ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವ ವಿಧಾನಸಭಾ ಮತಕ್ಷೇತ್ರದಿಂದ ದ್ವಿತೀಯ ಭಾರಿಗೆ ಆಯ್ಕೆ.

ದಿನಾಂಕ: 12-05-2018 ರಂದು ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವ ವಿಧಾನಸಭಾ ಮತಕ್ಷೇತ್ರದಿಂದ ತೃತೀಯ ಭಾರಿಗೆ ಆಯ್ಕೆಯಾಗಿ ಬಿ.ಎಸ್.ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗಿ ಸೇವೆ.

Leave a Reply

Your email address will not be published. Required fields are marked *