ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಮಹಿಳೆಯರಿಗೆ ಪ್ರಬಂಧ ಸ್ಪರ್ಧೆ
ದಾವಣಗೆರೆ ಮಹಾನಗರ ಪಾಲಿಕೆಯ ವತಿಯಿಂದ ಆ.15 ರವರೆಗೆ
ಹಮ್ಮಿಕೊಂಡಿರುವ ಅಂತರಾಷ್ಟ್ರೀಯ ಜೀವ ವೈವಿಧ್ಯತಾ ದಿನಾಚರಣೆ
ಅಭಿಯಾನದ ಅಂಗವಾಗಿ ದಾವಣಗೆರೆ ನಗರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ,
ಸಾರ್ವಜನಿಕರಿಗೆ ಹಾಗೂ ಮಹಿಳೆಯರಿಗೆ ಪ್ರಬಂಧ ಸ್ಪರ್ಧೆ
ಆಯೋಜಿಸಲಾಗಿದೆ.
ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢ, ಪದವಿಪೂರ್ವ, ಪದವಿ,
ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ‘ನಮ್ಮ ಸುತ್ತಲಿನ ಜೀವ ಸಂಕುಲ’
ವಿಷಯ ಕುರಿತು. ಸಾರ್ವಜನಿಕರಿಗೆ ‘ಜೀವ ವೈವಿಧ್ಯ ಸಂರÀಕ್ಷಣೆ ಏಕೆ?
ಹೇಗೆ? ಹಾಗೂ ಮಹಿಳೆಯರಿಗೆ “ಅಡುಗೆಮನೆ ತ್ಯಾಜ್ಯ ವಿಲೇವಾರಿ ಹೊಸ
ಆಲೋಚನೆಗಳೇನು?” ಎಂಬ ವಿಷಯಗಳ ಮೇಲೆ ಪ್ರಬಂಧ ಸ್ಪರ್ಧೆ
ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಎ4 ಹಾಳೆಯ ಒಂದೇ
ಬದಿಯಲ್ಲಿ 3 ಪುಟಕ್ಕೆ ಮೀರದಂತೆ ಪ್ರಬಂಧ ಬರೆದು ಆ.5 ರೊಳಗಾಗಿ
ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಗದೀಶ್ ಎಸ್.ಆರ್ ತಾಂತ್ರಿಕ ಸಹಾಯಕರು-
9632983527, ಹಾಗೂ ಜೀವ ವೈವಿಧ್ಯ ನಿರ್ವಹಣಾ ಸಮಿತಿಯ
ಸದಸ್ಯರುಗಳಾದ ಎಂ. ಗುರುಸಿದ್ಧಸ್ವಾಮಿ-9880531823, ಗಿರೀಶ್
ದೇವರಮನಿ- 9964328259, ಹೆಚ್.ಸಿ. ಜಯಮ್ಮ-9880155367, ರೋಹಿಣಿ ಎಸ್.ಎಂ-
9035105917, ರಘು ದೊಡ್ಡಮನಿ-9844363674 ಇವರನ್ನು
ಸಂಪರ್ಕಿಸಬಹುದು ಎಂದು ಮಹಾನಗರಪಾಲಿಕೆ ಆಯುಕ್ತರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.