ಗದಗ:

ಉತ್ತರ ಕರ್ನಾಟಕದ ಜನರ ಬಯಕೆಗೆ ಇವತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿರುವುದು ಸಂತಸ ತಂದಿದೆ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಡಾ.ಎಚ್. ಕೆ. ಪಾಟೀಲ ಅವರು ಶುಭ ಹಾರೈಸಿದ್ದಾರೆ.
ರಾಜ್ಯ ಸರಕಾರದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾದ ಹಿನ್ನಲೆ ಶುಭಹಾರೈಸಿ ಮಾತನಾಡಿದ ಅವರು ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಪರಹಾರ ಕಂಡುಕೊಳ್ಳಬೇಕಿದೆ. ರಾಜಕೀಯ ಅಧಿಕಾರ ಉತ್ತರ ಕರ್ನಾಟಕದ ಭಾಗದವರಿಗೆ ದೊರಕುತ್ತಿಲ್ಲ. ಈ ಕಾರಣಕ್ಕೆ ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿ ಕುಂಠಿತವಾಗಿದೆ. ಇದರಿಂದ ಈ ಭಾಗದ ಜನರ ಭಾವನೆಗಳು ಎಲ್ಲವೂ ಘಾಸಿಗೊಂಡಿವೆ ಎಂದರು.
ಬಸವರಾಜ ಬೊಮ್ಮಾಯಿ ಹಾಗೂ ನಾನು ಉತ್ತಮ ಸ್ನೇಹಿತರು. ಉತ್ತಮ ಆಡಳಿತಗಾರರು, ಭಾಷಣಕಾರರೂ ಆಗಿರುವ ಬೊಮ್ಮಾಯಿಯವರ ಆಡಳಿತ ಕಾಲದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ, ಉತ್ತರ ಕರ್ನಾಟಕ ಭಾಗಕ್ಕೆ ಆದ ಅನ್ಯಾಯ ಇನ್ಮುಂದೆ ಪೂರ್ಣವಾಗಿ ಇಲ್ಲವಾಗಲಿ. ಈ ಭಾಗದ ಜನರಿಗೆ ನ್ಯಾಯ ಸಿಕ್ಕು ವಿಶೇಷ ರೀತಿಯಿಂದ ಅಭಿವೃದ್ಧಿ ಆಗಲಿ. ಮಹಾದಾಯಿ ನದಿ ಜೋಡಣೆ ಯೋಜನೆ ಹಾಗೂ ಕೃಷ್ಣಾ ನದಿಯ ಕೆಲಸಗಳು ಬಹಳಷ್ಟು ಅಗಬೇಕಿದೆ. ಅವುಗಳನ್ನು ಕೈಗೆ ಎತ್ತಿಕೊಂಡು ಯೋಜನೆ ಜಾರಿಗೆ ತರುವ ಕೆಲಸವಾಗಬೇಕು. ಅಲ್ಲದೇ, ಅನುದಾನ ರಹಿತ ಸಾವಿರಾರು ಶಿಕ್ಷಣ ಸಂಸ್ಥೆಗಳ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಬೇಕಿದೆ ಎಂದು ಶಾಸಕ ಎಚ್.ಕೆ.ಪಾಟೀಲ ಅವರು ಹೇಳಿದರು.

Leave a Reply

Your email address will not be published. Required fields are marked *