ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ,
ಬೆಂಗಳೂರು, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್),
ಧಾರವಾಡ ಯುತ್ಸ್ ರೂರಲ್ ಡೆವಲಪ್‍ಮೆಂಟ್ ಆರ್ಗನೈಜೇಷನ್ ಮತ್ತು
ಶಾಂಭವಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಂಸ್ಥೆ ಇವರ
ಸಂಯುಕ್ತಾಶ್ರಯದಲ್ಲಿ ಒಂದು ದಿನದ ಉದ್ಯಮಶೀಲತಾ ಅರಿವು
ಕಾರ್ಯಕ್ರಮ ಬುಧವಾರದಂದು ಬಾಪೂಜಿ ಪಾಲಿಟೆಕ್ನಿಕ್ ಸೆಮಿನಾರ್ ಹಾಲ್‍ನಲ್ಲಿ
ಆಯೋಜಿಸಲಾಯಿತು.
ಲೀಡ್ ಬ್ಯಾಂಕ್‍ನ ಜಿಲ್ಲಾ ವಿಭಾಗೀಯ ಮಾರ್ಗದರ್ಶಿ ವ್ಯವಸ್ಥಾಪಕ ಸುಶೃತ್ ಡಿ.
ಶಾಸ್ತ್ರೀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೋವಿಡ್-19ರ ಕ್ಲಿಷ್ಟಕರ
ಪರಿಸ್ಥಿಯಲ್ಲೂ ಉದ್ಯಮದಾರರಬೇಕೆಂಬ ಹಂಬಲದಿಂದ ತರಬೇತಿ
ಪಡೆಯಲು ಆಗಮಿಸಿರುವ ಎಲ್ಲಾ ಶಿಬಿರಾರ್ಥಿಗಳನ್ನು ಅಭಿನಂದನಾರ್ಹರು
ಎಂದರು. ಸರ್ಕಾರದ ವಿವಿಧ ಯೋಜನೆಗಳ ಕುರಿತು ತಿಳಿಸಿದ ಅವರು
ಉದ್ಯಮದಾರರಾಗುವ ಹಂತದಲ್ಲಿ ಎದುರಿಸಬೇಕಾದ ಪ್ರಮುಖ
ವಿಚಾರಗಳ ಬಗ್ಗೆ ತಿಳಿಸಿದ ಅವರು, ದೇಶದ ಆರ್ಥಿಕತೆಯಲ್ಲಿ
ಉದ್ಯಮದಾರರ ಪಾತ್ರ ಹಾಗೂ ಜವಾಬ್ದಾರಿಗಳನ್ನು ತಿಳಿಸುವ ಮೂಲಕ
ಶಿಬಿರಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಬಾಪೂಜಿ ಪಾಲಿಟೆಕ್ನಿಕ್‍ನ ಪ್ರಾಂಶುಪಾಲ ನಾಗರಾಜಪ್ಪ ಡಿ. ಕೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಠಿಣ ಪರಿಶ್ರಮದಿಂದ
ಛಲ ಬಿಡದೆ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದಲ್ಲಿ ಉದ್ಯಮದಲ್ಲಿ
ಯಶಸ್ವಿಯಾಗಲು ಸಾದ್ಯ. ಉದ್ಯಮದಾರರು ಸದಾ ಗ್ರಾಹಕರ
ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೊಸ
ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಉತ್ತಮ.
ಶಿಬಿರಾರ್ಥಿಗಳು ತಾವು ಕಂಡ ಕನಸು ನನಸಾಗಲಿ ಎಂದು ಶುಭ
ಹಾರೈಸಿದರು.
ದಾವಣಗೆರೆಯ ಯೂತ್ಸ್ ರೂರಲ್ ಡೆವಲಪ್‍ಮೆಂಟ್ ಆರ್ಗನೈಜೇಷನ್‍ನ
ಅಧ್ಯಕ್ಷ ರಮೇಶ ಬಿ. ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಉದ್ಯವನ್ನು
ಸ್ಥಾಪಿಸುವದಷ್ಟೇ ಅಲ್ಲದೇ ಸರಿಯಾದ ರೀತಿಯಲ್ಲಿ ನಡೆಸಿಕೊಂಡು
ಹೋದರೆ ಖಂಡಿತವಾಗಿಯೂ ಯಶಸ್ವೀ ಉದ್ಯಮದಾರರಾಗಲು ಸಾಧ್ಯ
ಎಂದು ತಿಳಿಸಿದರು.
ಶಾಂಭವಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಂಸ್ಥೆಯ
ಕಾರ್ಯದರ್ಶಿ ಪ್ರವೀಣಕುಮಾರ ಎಸ್ ಮಾತನಾಡಿ, ಯುವಜನತೆ ಸ್ವ-
ಉದ್ಯಮದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದು ಸಂತೋಷದ ವಿಷಯ.
ಮೊದಲು ಸಣ್ಣ ಪ್ರಮಾಣದಲ್ಲಿ ಉದ್ಯಮವನ್ನು ಸ್ಥಾಪಿಸಿ ಛಲ ಬಿಡದೆ ಸತತ
ಪ್ರಯತ್ನ ಮಾಡಿದರೆ ಖಂಡಿತ ಉದ್ಯಮದಲ್ಲಿ ಯಶಸ್ಸು ಗಳಿಸಬಹುದು
ಎಂದರು.
ಉದ್ಯಮಶೀಲತಾಭಿವೃದ್ಧಿ ಕೋಶದ ಸಂಯೋಜಕ ಮಹೇಶ್ವರಪ್ಪ
ಕೆ.ಎನ್. ಅವರು ತರಬೇತಿಯಲ್ಲಿ ಉದ್ಯಮಶೀಲರ ಗುಣಲಕ್ಷಣಗಳು
ಯಾವ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು, ಉದ್ಯಮವನ್ನು ಯಾವ
ರೀತಿಯಲ್ಲಿ ಪ್ರಾರಂಭಿಸಬೇಕು, ಉದ್ಯಮ ಆರಂಭಿಸಲು ಇರುವಂತಹ
ಅವಕಾಶಗಳನ್ನು ಗುರುತಿಸುವುದು ಹೇಗೆ, ಸವಾಲುಗಳು
ಎದುರಿಸುವ ಬಗೆ, ಸರ್ಕಾರಿ ಯೋಜನೆಗಳ ಮತ್ತು ವಿವಿಧ ಇಲಾಖೆಗಳ
ಕುರಿತು ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಯಾವ ರೀತಿಯಲ್ಲಿ
ಪಡೆದುಕೊಳ್ಳುವ ಹಂತಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿ ಆಶಾ ಪ್ರಾರ್ಥಿಸಿದರು, ಬಸವರಾಜ ಜಿ. ಬಿ. ಸ್ವಾಗತಿಸಿ,
ಕೊನೆಯಲ್ಲಿ ವಂದಿಸಿದರು. ಸವಿತ ನಿರೂಪಿಸಿದರು.