ದಾವಣಗೆರೆ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ
ಮಾಸಾಶನ ಪಡೆಯುತ್ತಿರುವ ಸಾಹಿತಿ ಹಾಗೂ ಕಲಾವಿದರು ಜೀವಿತಾವಧಿ
ಪ್ರಮಾಣ ಪತ್ರವನ್ನು ಸಲ್ಲಿಸಲು ಆಗಸ್ಟ್ 03 ರವರೆಗೆ ಅವಧಿ
ವಿಸ್ತರಿಸಲಾಗಿದೆ.
ಜೀವಿತಾವಧಿ ಪ್ರಮಾಣಪತ್ರವನ್ನು ಸಂಬಂಧಪಟ್ಟ ಬ್ಯಾಂಕ್
ಮ್ಯಾನೇಜರ್ ಸಹಿ ಪಡೆದು ತಮ್ಮ ಆಧಾರ್ ಕಾರ್ಡ್, ಪಿಂಚಣಿ ಪುಸ್ತಕದ
ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ನಿಗದಿತ ದಾಖಲೆಗಳನ್ನು
ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ,
ಜಿಲ್ಲಾಡಳಿತ ಭವನÀ ಇವರಿಗೆ ಸಲ್ಲಿಸಲು ಜು.25 ಕೊನೆಯ ದಿನವಾಗಿತ್ತು.
ಆದರೆ ಕಲಾವಿದರು ಈವರೆಗೂ ದಾಖಲೆಗಳನ್ನು ಸಲ್ಲಿಸದಿರುವ ಕಾರಣ
ಅವಧಿ ಆ. 03 ರವರೆಗೆ ಅವಧಿ ವಿಸ್ತರಿಸಲಾಗಿದ್ದು, ಮಾಸಾಶನ ಪಾವತಿ
ವಿಳಂಬಕ್ಕೆ ಅವಕಾಶ ಕೊಡದೇ ಆ.03 ರೊಳಗಾಗಿ ಖುದ್ದಾಗಿ ಅಥವಾ ಅಂಚೆ
ಮೂಲಕ ಕಳುಹಿಸಿಕೊಡಲು ಸೂಚನೆ ನೀಡಲಾಗಿದೆ.
ನಿಗದಿತ ನಮೂನೆಯನ್ನು ಕಚೇರಿಯಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08192-234849 ಗೆ
ಸಂಪರ್ಕಿಸಬೇಕೆಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ
ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.