ದಿನಾಂಕ: 05-03-2020 ರಂದು ಮಂಡಿಸಿರುವ 2020-21ನೇ ಸಾಲಿನ ಆಯವ್ಯಯ ಭಾಷಣದಲ್ಲಿ
ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಕೆಳಕಂಡಂತೆ ಘೋಷಿಸಿರುತ್ತಾರೆ: “223, ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಅಧಿಕ ಸಾಂದ್ರತೆ ವಲಯಗಳಲ್ಲಿ ಬೆಂಗಳೂರಿನ ಶೇ.80% ರಷ್ಟು ವಾಹನ ದಟ್ಟಣೆ ಇದೆ. ಇವುಗಳು ಸುಮಾರು 190 ಕಿಲೋಮೀಟರಷ್ಟು ಉದ್ದವಿದ್ದು, ಇವುಗಳನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಮುಖೇನ ಕೈಗೆತ್ತಿಕೊಂಡು ಅಭಿವೃದ್ಧಿಗೊಳಿಸಿ ಮೇಲುಸ್ತುವಾರಿ ವಹಿಸಲು ಪ್ರಸ್ತಾವಿಸಲಾಗಿದೆ. ಇದಕ್ಕೆ ಸಾವಿರಾರು ಕೋಟಿ ವೆಚ್ಚ ಮಾಡಲು ಸರ್ಕಾರ ಮುಂದಾಗಿದೆ.”

ಉದಾಹರಣೆಗೆ: ಬಿಬಿಎಂಪಿ, ಬಿಡಿಎ, ಬಿ.ಎಂ.ಆರ್.ಸಿ.ಎಲ್., ಬೆಂಗಳೂರು ಸ್ಮಾರ್ಟ್ ಸಿಟಿ ಹಾಗೂ ಇತರೆ ಸಂಸ್ಥೆಗಳ ಮೂಲಕ ಈಗಾಗಲೇ ಈ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅದರಲ್ಲಿ ಅದೇ ರಸ್ತೆಗಳಿಗೆ ಮತ್ತೆ ಕೆ.ಆರ್.ಡಿ.ಸಿ.ಎಲ್ ಮೂಲಕ ಮರು ಅಭಿವೃದ್ಧಿ ಹಾಗೂ ನಿರ್ವಹಣೆಗೆ ಟೆಂಡರ್ ಮಂಡಿಸಿ ಅಭಿವೃದ್ಧಿಪಡಿಸಲು ಮುಂದಾಗಿರುವುದು ಮೇಲ್ನೋಟಕ್ಕೆ ಅಕ್ರಮ ನಡೆಯುತ್ತಿರುವ ಬಗ್ಗೆ ಎತ್ತಿ ತೋರುತ್ತಿದೆ.

ಉದಾಹರಣೆಗೆ: ಪ್ರತಿ ರಸ್ತೆಯು ಅಭಿವೃದ್ಧಿ ಹೊಂದಿದ ನಂತರ ಯಾರು ಗುತ್ತಿಗೆ ಪಡೆದಿರುತ್ತಾರೋ ಅವರೇ ಆ ರಸ್ತೆಯ ನಿರ್ವಹಣೆಯನ್ನು ಮೂರು ವರ್ಷಗಳ ಕಾಲ ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ. ಆದರೆ ಈ ಕಾಮಗಾರಿಗಳಿಗೆ (12 High Traffic Density Corridor) ಮಾತ್ರ ವಿಶೇಷವಾಗಿ 5 ವರ್ಷಗಳ ಕಾಲ ನಿರ್ವಹಣೆಗೆ ಅವಕಾಶ ನೀಡಿ ಮುಂಗಡವಾಗಿ ಹಣವನ್ನು ಸಹ ಕಾಯ್ದಿರಿಸಲಾಗಿದೆ. ಈ ಕಾಮಗಾರಿಗಳಿಗೆ ನೀಡಿರುವ ಆದೇಶವೂ ಕಾನೂನುಬಾಹಿರವಾಗಿರುತ್ತದೆ ಹಾಗೂ ಉದ್ದೇಶಪೂರಕವಾಗಿ ಸಾರ್ವಜನಿಕರ ಹಣವನ್ನು ದುಂದುವೆಚ್ಚ ಮಾಡಿ ಅಕ್ರಮದ ಮೂಲಕ ಲೂಟಿ ಮಾಡುವ ಉದ್ದೇಶವನ್ನು ಈ ಯೋಜನೆಯ ಹೊಂದಿರುತ್ತದೆ
ಎಂದು ಮಾಜಿ ಮೇಯರ್ ಬಿಬಿಎಂಪಿಯ ರಾಮಚಂದ್ರಪ್ಪನವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರು ಇವರ ವತಿಯಿಂದ ಲೋಕಾಯುಕ್ತರಿಗೆ ಶೀಘ್ರವಾಗಿ ತನಿಖೆ ಮಾಡಲೆಂದು ಒತ್ತಾಯಿಸಿದರು

ಈ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಎಂ ರಾಮಚಂದ್ರಪ್ಪ, ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್ ಮನೋಹರ್, ಎ ಆನಂದ್, ಎಂ ಎ ಸಲೀಂ, ಪುಟ್ಟರಾಜು, ಮಹೇಶ್, ಚಂದ್ರಶೇಖರ್ ಕಾಂಗ್ರೆಸ್ ಪಕ್ಷದ ಮುಖಂಡರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *