ಪ್ರಸಕ್ತ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ
ಅನುಷ್ಠಾನಗೊಳ್ಳಲಿರುವ ವಿವಿಧ ಇಲಾಖೆಯಡಿ ವಿವಿಧ
ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಅರ್ಹ ಆಸಕ್ತ ದಾವಣಗೆರೆ
ತಾಲ್ಲೂಕಿನ ರೈತರುಗಳಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ವಿವಿಧ ಯೋಜನೆಗಳಡಿ ಬೆಂಗಳೂರಿನ ತೋಟಗಾರಿಕೆ ನಿರ್ದೇಶನಾಲಯ
ಲಾಲ್ಬಾಗ್ ಇವರಿಂದ ನೀಡಲಾಗಿರುವ ಮಾರ್ಗಸೂಚಿಯನ್ವಯ ಆಸಕ್ತ
ರೈತರು ಅರ್ಜಿ ಸಲ್ಲಿಸಲು ಆ.12 ಕೊನೆಯ ದಿನಾಂಕವಾಗಿರುತ್ತದೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕಂದುಬಾಳೆ,
ಡ್ರ್ಯಾಗನ್ ಫ್ರೂಟ್, ತರಕಾರಿ, ಗುಲಾಬಿ ಹೂ, ಗಡ್ಡೆ ಜಾತಿಯ ಹೂವು,
ಬಿಡಿ ಹೂವುಗಳು, ಪ್ರದೇಶ ವಿಸ್ತರಣೆ (ಪರಿಶಿಷ್ಟ ಜಾತಿ, ಪ.ಪಂಗಡ, ಸಣ್ಣ
ಹಾಗೂ ಅತಿ ಸಣ್ಣ ರೈತರಿಗೆ ಆದ್ಯತೆ ಮೇರೆಗೆ), ಅಣಬೆ ಉತ್ಪಾದನ ಘಟಕ.
ವೈಯಕ್ತಿಕ ಕೃಷಿಹೊಂಡ ಮತ್ತು ಸಮುದಾಯ ಕೃಷಿಹೊಂಡ, ಮಿನಿ
ಟ್ರ್ಯಾಕ್ಟರ್ (20 ಹೆಚ್ಪಿ) (ಸಾಮಾನ್ಯ ಮಹಿಳೆ, ಸಣ್ಣ/ಅತಿ ಸಣ್ಣ ರೈತರು,
ಪ.ಜಾತಿ ಸಣ್ಣ/ಅತಿ ಸಣ್ಣ ರೈತರು ವರ್ಗದವರಿಗೆ), ಪಾಲಿಹೌಸ್ ಮತ್ತು ನೆರಳು
ಪರದೆ ಘಟಕ, ಪಕ್ಷಿ ನಿರೋದಕ ಬಲೆ, ಪ್ಲಾಸ್ಟಿಕ್ ಮಲ್ಚಿಂಗ್, ಪ್ಯಾಕ್ಹೌಸ್ ಘಟಕ
ಮತ್ತು ತೋಟಗಾರಿಕೆ ಬೆಳೆಗಳ ಪ್ರಾಥಮಿಕ ಸಂಸ್ಕರಣಾ ಘಟಕ,
ಮೊಬೈಲ್ ವೆಂಡಿಂಗ್ ಕಾರ್ಟ್ (ತಳ್ಳುವ ಗಾಡಿ) ಘಟಕಗಳನ್ನು
ಆಯ್ಕೆಮಾಡಲಾಗಿದೆ.
ಇಲಾಖೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಎಲ್ಲಾ
ಯೋಜನೆಗಳು ಪ್ರಸಕ್ತ ಸಾಲಿನ ಮಾರ್ಗಸೂಚಿಯನುಸಾರ ಹಾಗೂ
ನಿಗದಿಪಡಿಸಿರುವ ಗುರಿಯನುಸಾರ ಅರ್ಜಿಗಳನ್ನು ಜೇಷ್ಠತೆಯ
ಮೂಲಕ ಆಯ್ಕೆ ಮಾಡಲಾಗುವುದು. ಯಾವುದೇ ಉಳಿಕೆ ಅರ್ಜಿಗಳಿಗೆ
ಮುಂದಿನ ವರ್ಷಕ್ಕೆ ಅವಕಾಶವಿರುವುದಿಲ್ಲ. ಮುಂದುವರೆದು ಮಹಾತ್ಮ
ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಸಣ್ಣ, ಅತಿಸಣ್ಣ,
ಪರಿಶಿಷ್ಠ ಜಾತಿ ಹಾಗೂ ಪ.ಪಂಗಡ ರೈತರುಗಳು ಫಲಾನುಭವಿ
ಆಧಾರಿತ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಬಹುದಾಗಿದೆ.
ಅರ್ಜಿಗಳನ್ನು ದಾವಣಗೆರೆ ತಾಲ್ಲೂಕಿಗೆ ಸಂಬಂಧಿಸಿದ ರೈತ ಸಂಪರ್ಕ
ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಂದ ಪಡೆದು ಭರ್ತಿ
ಮಾಡಿದ ಅರ್ಜಿಗಳನ್ನು ಆ.12 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ
ಕೇಂದ್ರಗಳ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಹಾಗೂ ಹಿರಿಯ
ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಇವರನ್ನು ಕಚೇರಿ
ಸಮಯದಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ಹಿರಿಯ
ಸಹಾಯಕ ತೋಟಗಾರಿಕೆ ನಿರ್ದೇಶಕಿ ಶಶಿಕಲಾ.ಟಿ.ಆರ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.