ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಸಚಿವರು ಹಾಲಿ ಶಾಸಕರು ಹಾಗೂ ಮಧ್ಯ ಕರ್ನಾಟಕದ, ಬಿ.ಜೆ.ಪಿ ಯ ಭೀಷ್ಮಾ ಚಾರಿ ಎಂದೇ ಎಲ್ಲರ ಮುನದಲ್ಲಿರುವ ಮಾನ್ಯ ಶ್ರೀ ಎಸ್.ಎ.ರವೀಂದ್ರನಾಥ್ ಇವರನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ರವರ ಮಂತ್ರಿ ಮಂಡಲದಲ್ಲಿ ಸಚಿವರನ್ನಾಗಿ ಮಾಡಬೇಕೆಂದು ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ ನಳೀನ್ ಕುಮಾರ್ ಕಟೀಲ್ ರವರಲ್ಲಿ ಹಾಗೂ ರಾಷ್ಟ್ರೀಯ ನಾಯಕರುಗಳಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ವಿನಯ ಪೂರ್ವಕವಾಗಿ ಒತ್ತಯಮಾಡಿತ್ತಾ, ಮಾನ್ಯ ಶ್ರೀ ಎಸ್.ಎ.ರವೀಂದ್ರನಾಥ್ ಇವರನ್ನು ಸಚಿವರನ್ನಾಗಿ ಮಾಡುವುದರಿಂದ ದಾವಣಗೆರೆ ಜಿಲ್ಲೆ ಸೇರಿದಂತೆ ಮಧ್ಯ ಕರ್ನಾಟಕ ಭಾಗದಲ್ಲಿ ಬಿ.ಜೆ.ಪಿ ಯ ಇನ್ನು ಹೆಚ್ಚಿನ ಶಕ್ತಿಯುತವಾಗಿ ಬಲಗೊಳ್ಳುತ್ತದೆ. ಎಂದು ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿಯ ಕಾರ್ಯಕತರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶ್ರೀ ಎಸ್ ಅಬ್ದುಲ್ ಮಜೀದ್ ರಾಜ್ಯ ನಿರ್ದೇಶಕರು ಅ.ಬಾ, ಶ್ರೀ ಉಮೇಶ್ ಪಟೇಲ್ ಉಪಾಧ್ಯಕ್ಷರು, ಶ್ರೀ ಸಿದ್ದಪ್ಪ ಅಡಾಣಿ ಅಧ್ಯಕ್ಷರು ಒ.ಬಿ.ಸಿ ಮೋರ್ಚ್, ಶ್ರೀ ಎಸ್. ಪಿ ಶ್ರೀನಿವಾಸ್ ಕಾರ್ಯದರ್ಶಿ ಒ.ಬಿ.ಸಿ, ಶ್ರೀ ನಾಗೇಶ್ ಕುಮಾರ್ ರೈತ ಮುಖಂಡರು ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.