ನೂತನ ಮುಖ್ಯಮಂತ್ರಿಯಾಗಿ ಆಗಿ ಬಸವರಾಜಬೊಮ್ಮಾಯಿ ಅಧಿಕಾರ ಸ್ವೀಕರಿಸಿ ಒಂದುವಾರ ಆಗಿರುವುಲ್ಲ ಆದರೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ 6-7 ತಿಂಗಳು ಮಾತ್ರ ಅಧಿಕಾರ ನಡೆಸಲಿದ್ದಾರೆ. 2022 ರ ಮಾರ್ಚ್ ನಲ್ಲಿ ಗಡ್ಡಧಾರಿಯ ವ್ಯಕ್ತಿ ಮುಖ್ಯಮಂತ್ರಿ ಯಾಗಲಿದ್ದಾರೆಂದು ವಿಜಯನಗರ ಜಿಲ್ಲೆ ಹೂವಿನ ಹಡ ಗಲಿ ತಾಲೂಕು ನಲ್ಲಿರುವ ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳು ಶ್ರೀ ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ.
ಮೈಲಾರದಲ್ಲಿ ಭರತಹುಣ್ಣುಮೆಯ
ದಿನದಂದೂನಡೆದಿದ್ದ ಕಾರ್ಣಿಕದಲ್ಲಿ ನುಡಿದಿದ್ದ ದೈವವಾಣಿಯನ್ನು ಮತ್ತೆ ವಿಶ್ಲೇಷಣೆಮಾಡಿರುವ ಧರ್ಮದರ್ಶಿ ಶ್ರೀವೆಂಕಪ್ಪಯ್ಯಒಡೆಯರ್ ಅವರು
” ಮುತ್ತಿನರಾಶಿ ಮೂರು ಭಾಗವಾಗಿ ತಲೇ ಪರಾಕ್ ” ಎಂಬುದು ಆದಿನದ ದೈವವಾಣಿಆಗಿತ್ತು.ಮೈಲಾರಭವಿಷ್ಯ ವಾಣಿಯಂತೆ ಈಗಿರುವ ಸರ್ಕಾರದ ಆಡಳಿತದಲ್ಲಿ ಮೂವರು ಜನ ಸಿಎಂ ಆಗಿ ಮುಕ್ತಾಯ ಆಗುತ್ತೆ. ಆದ್ದರಿಂದ ಕೆಲವೇತಿಂಗಳಲ್ಲಿ ಮುಖ್ಯಮಂತ್ರಿಯ ಸ್ಥಾನ ಮತ್ತೆ ಬದಲಾವಣೆ ಆಗುತ್ತದೆ ಎಂದು ಶ್ರೀ ವೆಂಕಪ್ಪಯ್ಯಒಡೆಯರ್
ರವರು ವಿಶ್ಲೇಷಣೆ ಮಾಡಿದ್ದಾರೆ.