ದೇಶದಲ್ಲಿಯೇ ಅತಿ ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ, ಮಧ್ಯಪ್ರದೇಶದಲ್ಲಿ 3,421 ಕರ್ನಾಟಕದಲ್ಲಿ 1,783 ಮಹಾರಾಷ್ಟ್ರದ ಕಾಡಿನಲ್ಲಿ 1,690 ಚಿರತೆಗಳಿವೆ.

ಕಳೆದ ವಾರ ನವದೆಹಲಿಯಲ್ಲಿ ಬಿಡುಗಡೆಯಾದ ಭಾರತದ ವನ್ಯಜೀವಿ ಸಂಸ್ಥೆ ಮಾಹಿತಿ ಪ್ರಕಾರ, 2018 ರಲ್ಲಿ ಭಾರತದಲ್ಲಿ ಹುಲಿ ಮೀಸಲು ಪ್ರದೇಶದಲ್ಲಿ 12,852 ಚಿರತೆಗಳಿದ್ದವು ಎಂಬುದನ್ನು ತಿಳಿಸುತ್ತದೆ. ಚಿರತೆಗಳ ಜನಸಂಖ್ಯೆಯನ್ನು ಕ್ಯಾಮೆರಾ ಟ್ರ್ಯಾಪ್‌ಗಳನ್ನು ಬಳಸಿ ಅಂದಾಜು ಮಾಡಲಾಯಿತು.

ಕರ್ನಾಟಕದಲ್ಲಿ, ಈಗ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಎಂದು ಕರೆಯಲ್ಪಡುವ ದಾಂಡೇಲಿ ಮತ್ತು ಅನಾಶಿ ಹುಲಿ ಪ್ರದೇಶಗಳು 221 ಚಿರತೆಗಳಿವೆ ಎಂದು ದಾಖಲಿಸಿವೆ. ಈ ಪ್ರದೇಶವು 23-25 ಹುಲಿಗಳನ್ನು ಹೊಂದಿದೆ ಮತ್ತು ಇದು ಕರ್ನಾಟಕದ ಅತಿದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾಗಿದೆ.

Leave a Reply

Your email address will not be published. Required fields are marked *