ರಾಜ್ಯದ ಆಡಳಿತಾರೂಢ ಪಕ್ಷ ಬಾರಿಯ ಜನತಾ ಪಕ್ಷದ ನೂತನ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರ ನೂತನ ಸಚಿವ ಸಂಪುಟದಲ್ಲಿ ರಡ್ಡಿ ಜನಾಂಗಕ್ಕೆ ಪ್ರಾಮುಖ್ಯತೆ ನೀಡಿ ಒಂದು ಉಪಮುಖ್ಯ ಮಂತ್ರಿ ಸ್ಥಾನ ಹಾಗೂ ಎರಡು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನಮಾನ ನೀಡಬೇಕೆಂದು ಅಖಿಲ ಭಾರತ ರೆಡ್ಡಿ ಒಕ್ಕೂಟ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ.ರಾಜ್ಯದಲ್ಲಿ ಬಾರತೀಯ ಜನತಾ ಪಕ್ಷದಿಂದ ಚುನಾಯಿತ ಶಾಸಕರಾದ
ದೊಡ್ಡನಗೌಡ ಪಾಟೀಲ ಹುನಗುಂದ ಮತಕ್ಷೇತ್ರ
ಎ ಎಸ್ ನಡಹಳ್ಳಿ ಮುದ್ದೇಬಿಹಾಳ ಮತಕ್ಷೇತ್ರ
ಸೋಮನಗೌಡ ಪಾಟೀಲ ದೇವರ ಹಿಪ್ಪರಗಿ ಮತಕ್ಷೇತ್ರ
ಜೆ ಎಚ್ ತಿಪ್ಪಾರೆಡ್ಡಿ ಚಿತ್ರದುರ್ಗ ಮತಕ್ಷೇತ್ರ
ವೆಂಕಟರೆಡ್ಡಿ ಮುದ್ನಾಳ ಯಾದಗಿರಿ ಮತಕ್ಷೇತ್ರ
ಎಸ್ ಆರ್ ವಿಶ್ವನಾಥ ಯಲಹಂಕ ಮತಕ್ಷೇತ್ರ
ಹಾಲಪ್ಪ ಆಚಾರ್ಯ ಯಲಬುರ್ಗಾ ಮತಕ್ಷೇತ್ರ
ಸೋಮಶೇಖರ ರೆಡ್ಡಿ ಬಳ್ಳಾರಿ ನಗರ
ಎಮ್ ಸತೀಶ ರೆಡ್ಡಿ ಬೊಮ್ಮನಹಳ್ಳಿ ಮತಕ್ಷೇತ್ರ
ಕರುಣಾಕರ ರೆಡ್ಡಿ ಹರಪನಹಳ್ಳಿ ಮತಕ್ಷೇತ್ರ
ಕೆ ಸುಧಾಕರ ಚಿಕ್ಕ ಬಳ್ಳಾಪೂರ ಮತಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಹನ್ನೆರಡು ಜನ ಕಮಲ ಹರಳಿಸಿದ ಕೀರ್ತಿ ಹೊಂದಿದ್ದಾರೆ. ರಾಜ್ಯದ ಸರ್ವ ಸಮಾಜದ ಜನರನ್ನು ಸಮಾನ ಮನಸ್ಕರಾಗಿ ಕಾಣುವ ಒಳ್ಳೆಯ ಮನಸ್ಸುಳ್ಳವರಾಗಿದ್ದು ಇವರೆಲ್ಲರಿಂದ ತಮ್ಮ ಮತಕ್ಷೇತ್ರದ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದಾರೆ.

ಅದೇ ರೀತಿ ಸಮಸ್ತ ನಾಡಿನ ಜನತೆಯ ಹಿತದೃಷ್ಟಿಯಿಂದ ಹಾಗೂ ಅಭಿವೃದ್ಧಿಗೆ ಟೊಂಕಕಟ್ಟಿ ನಿಲ್ಲುವುದರಲ್ಲಿ ಸಂಶಯವೇ ಇಲ್ಲ ಹಾಗೆ ಬಿಜೆಪಿ ಪಕ್ಷದ ಬಲವರ್ಧನೆಗೆ ಹಗಲಿರುಳು ಶ್ರಮಿಸಿದ್ದಾರೆ. ಕೊರೋಣಾ ಸಂದರ್ಭದಲ್ಲಿಯೂ ಸಹಿತ ತಮ್ಮ ಕೆಲಸಗಳನ್ನು ಬದಿಗಿಟ್ಟು ಬಡಜನರ ಸೇವೆಯಲ್ಲಿ ತೊಡಗಿರುತ್ತಾರೆ. ಬಡವರ ಸೇವೆಯಲ್ಲಿ ತೊಡಗಿ ದಿನ ನಿತ್ಯದ ಬಳಕೆಯ ಆಹಾರ ಧಾನ್ಯ ಹಾಗೂ ಇನ್ನಿತರ ಗೃಹ ಬಳಕೆಯ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ಹೀಗಾಗಿ ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಒಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ರೆಡ್ಡಿ ಸಮಾಜದ ಶಾಸಕರಿಗೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಭಾಗದಲ್ಲಿ ಇರುವ ರೆಡ್ಡಿ ಸಮಾಜದ ಶಾಸಕರಿಗೆ ಎರಡು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಅಖಿಲ ಭಾರತ ರೆಡ್ಡಿ ಒಕ್ಕೂಟ ಒತ್ತಾಯಪಡಿಸುತ್ತದೆ.ಒಂದು ವೇಳೆ ಪರಿಗಣಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ…
ಧನ್ಯವಾದಗಳೊಂದಿಗೆ
ತಮ್ಮ ವಿಶ್ವಾಸಿಗಳು
ಚಂದ್ರಶೇಖರ ಅರಳಿಕಟ್ಟೆ
ಅಧ್ಯಕ್ಷರು ರಡ್ಡಿ ವಧೂವರರ ವೇದಿಕೆ ಹೆಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆ ವಿಧ್ಯಾಗಿರಿ
ವಾಯ್ ಎಚ್ ಹೊಸಮನಿ ಕಾರ್ಯದರ್ಶಿ ರಡ್ಡಿ ವಧೂವರರ ವೇದಿಕೆ ಹೆಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆ ವಿಧ್ಯಾಗಿರಿ

ರಮೇಶ ಬಗಲಿ
ರಾಜ್ಯ ಕಾರ್ಯಕಾರಿಣಿಯ ಸದಸ್ಯರು.
ಬಿ ಎಮ್ ಪಾಟೀಲ ರಾಜ್ಯ ಕಾರ್ಯಕಾರಿಣಿಯ ಸದಸ್ಯರುಶಂಕರ ರೆಡ್ಡಿರಾಜ್ಯ ಕಾರ್ಯಕಾರಿಣಿಯ ಸದಸ್ಯರು.

Leave a Reply

Your email address will not be published. Required fields are marked *