ಕೋವಿಡ್-19 ರ ಕಾರಣದಿಂದಾಗಿ ಲಾಕ್‍ಡೌನ್ ಅವಧಿಯಲ್ಲಿ
ನಿಗದಿಯಾಗಿದ್ದ ಚಾಲನಾ ಅನುಜ್ಞಾ ಪತ್ರಕ್ಕೆ ಸಂಬಂಧಿಸಿದ
ಅರ್ಜಿಗಳನ್ನು ಕಳೆದ ಜೂ.21 ರಿಂದ ಇಲ್ಲಿಯವರೆಗೆ ವಿಲೇವಾರಿ
ಮಾಡಲಾಗಿದೆ. ಕೋವಿಡ್-19 ಮೂರನೇ ಅಲೆ ಬರುವ ಸಾಧ್ಯತೆ
ಇರುವುದನ್ನು ಪರಿಗಣಿಸಿ, ಹೊಸ ಅರ್ಜಿಗಳ ಸ್ಲಾಟ್‍ಗಳನ್ನು
ಮುಂದಿನ 7 ದಿನಗಳಂತೆ ಮಾತ್ರ ಸ್ಲಾಟ್ ನಿಗದಿಪಡಿಸಲು
ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ
ದೂರವಾಣಿ ಸಂ. 9449863485 ಅಥವಾ ನೇರವಾಗಿ ಕಚೇರಿಯನ್ನು
ಸಂಪರ್ಕಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು
ತಿಳಿಸಿದ್ದಾರೆ.

Leave a Reply

Your email address will not be published. Required fields are marked *