ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕತ್ತಿಗೆ ಗ್ರಾಮದ ತಟ್ಟೆಕೆರೆಯ ಅಂಗಳದಲ್ಲಿ ಅತಣ್ಯ ಸಸಿ ನಾಟಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಎಂ ಆರ್ ಮಹೇಶ್ ಗಿಡ ನಾಟಿ ಮಾಡಿ ಧರ್ಮಸ್ಥಳದ ಧರ್ಮಾಧಿಕಾರಿಗಳಾ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಕಾರ್ಯ ದೇಶಕ್ಕೆ ಮಾದರಿಯಾಗಿದ್ದು ಸ್ವಸಹಾ ಸಂಘಗಳ ಮುಖೇನ ಸಾನ್ಯ ಜನರ ಸಬಲಿಕರಣ ಮಾಡುವುದರ ಜೊತೆಗೆ ಸಮಾಜದ ಅಭಿವೃದ್ಧಿ, ಅರಣ್ಯಿಕರಣ, ನೆಲ ಜಲ ಸಂರಕ್ಷಣೆ ಕಾರ್ಯಕ್ರಮ ಅನನ್ಯವಾಗಿದ್ದು ಜನರು ಇದರ ಲಾಭ ಪಡೆಯುವುದರ ಜೊತೆಗೆ ಸಂರಕ್ಷಣೆ ಕೂಡಾ ಮಾಡಬೆಕೆಂದರು.


ಯೋಜನಾಧಿಕಾರಿ ಶ್ರೀ ಬಸವರಾಜ ಮಾತನಾಡಿ ಪೂಜ್ಯ ಖಾವಂದರ ಆಶಯದಂತೆ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರ ಮಾರ್ಗದರ್ಶನದಂತೆ ಈ ವರ್ಷ ತಾಲೂಕಿನಾದ್ಯಾಂತ ಸಾಮಾಜಿ ಅರಣ್ಯ ಬೆಳೆಸುವುದಕ್ಕಾಗಿ ತಾಲೂಕಿನಲ್ಲಿ 11 ಕಡೆಗಳಲ್ಲಿ 1100 ಅರಣ್ಯ ಸಸಿ ನಾಟಿ ಮಾಡಿಸುವುದರ ಮೂಲಕ ಜನರಲ್ಲಿ ಪರಿಸರ ಜಾಗ್ರತಿ ಕಾರ್ಯಕ್ರಮ ಮಾಡಲಾಗಿದ್ದು, ತಾಲೂಕಿನಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆಯಡಿಯಲ್ಲಿ ಎರಡು ಕೆರೆ ಅಭಿವೃದ್ಧಿ ಪಡಿಸಲಾಗಿದ್ದು ಎರಡು ಕೆರೆಗಳ ಅಂಗಳದಲ್ಲಿ ತಲಾ 100 ಸಸಿ ನಾಟಿ ಮಾಡಿಸಲಾಗಿದೆ ಎಂದು ಮಾಹಿತಿ ನಿಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ರಮೇಶ್ ಬಿ. ವಹಿಸಿದ್ದರು. ಕೆರೆ ಸಮಿತಿ ಅಧ್ಯಕ್ಷ ಶ್ರೀ ವೀರುಪಾಕ್ಷಪ್ಪ ಹಾಲು ಉದ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಶ್ರೀ ಪಾಲಾಕ್ಷಪ್ಪ. ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಮಮತಾ. ಸ್ವಸಹಾಯ ಸಂಘದ ಸದಸ್ಯರುಗಳು, ನವಜೀವನ ಸಮಿತಿ ಸದಸ್ಯರು ಗ್ರಾಮಸ್ಥರು ಭಾಗವಹಿಸಿದ್ದರು. 100 ನೆರಳೆ ಬೆವಿನ ಸಸಿಗಳನ್ನು ನಾಡಿ ಮಾಡಿಸಲಾಯಿತು. ವಲಯ ಮೆಲ್ವಿಚಾರಕ ಶ್ರೀ ಶಿವರಾಮ ಕಾರ್ಯಕ್ರಮ ನಿರ್ವಹಿಸಿ ಸಾವಗತಿಸಿದರು, ಸೇವಾಪ್ರತಿನಿಧಿ ಶ್ರೀಮತಿ ಕಸ್ತೂರಿ ವಂದಿಸಿದರು.

Leave a Reply

Your email address will not be published. Required fields are marked *