ಪರಿಷ್ಕರಣೆ

 ಭಾರತ ಚುನಾವಣಾ ಆಯೋಗದ ಸೂಚನೆಯಂತೆ 2022 ರ
ಜನವರಿ 01 ರ ದಿನವನ್ನು ಅರ್ಹತಾ ದಿನವನ್ನಾಗಿಸಿಕೊಂಡು,
ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ
ಪರಿಷ್ಕರಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
   ನವೆಂಬರ್ 01 ರಂದು ಮತದಾರರ ಪಟ್ಟಿಯ ಕರಡು
ಅಧಿಸೂಚನೆಯನ್ನು ಹೊರಡಿಸಲಾಗುವುದು. ನ.01 ರಿಂದ 30
ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು
ಅವಕಾಶವಿರುತ್ತದೆ. ಡಿಸೆಂಬರ್ 20 ರಂದು ಹಕ್ಕು ಮತ್ತು
ಆಕ್ಷೇಪಣೆಗಳನ್ನು ವಿಲೇಪಡಿಸಲು ಕ್ರಮ
ಕೈಗೊಳ್ಳಲಾಗುವುದು. 2022 ರ ಜನವರಿ 05 ರಂದು ಅಂತಿಮ
ಮತದಾರರ ಪಟ್ಟಿಯ ಅಧಿಸೂಚನೆ ಹೊರಡಿಸಲಾಗುವುದು.
  ಜಿಲ್ಲೆಯ ಎಲ್ಲಾ ಮತದಾರರು, ಮತದಾರರ ಪಟ್ಟಿಯಲ್ಲಿ
ತಮ್ಮ ನೋಂದಣಿ ಸರಿಯಾಗಿರುವ ಬಗ್ಗೆ
ಖಚಿತಪಡಿಸಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ
ಯಾವುದೇ ಲೋಪಗಳಿದ್ದಲ್ಲಿ ಮೇಲೆ ತಿಳಿಸಿದ
ಕಾಲಾವಧಿಯೊಳಗೆ ಸೂಕ್ತ ದಾಖಲೆಗಳೊಂದಿಗೆ ಸಂಬಂಧಿಸಿದ
ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಬೇಕು. ಮತದಾರರ ಪಟ್ಟಿಗೆ
ಸಂಬಂಧಿಸಿದಂತೆ ಮತದಾರರು ಗಿoಣeಡಿ heಟಠಿಟiಟಿe ಒobiಟe ಂಠಿಠಿ ನ್ನು
ಬಳಸುವಂತೆ ಸೂಚನೆ ನೀಡಲಾಗಿದೆ.

  ಈ ಬಗ್ಗೆ ಯಾವುದೇ ಸಹಾಯಕ್ಕೆ, ದೂರು ಅಥವಾ ಹೆಚ್ಚಿನ
ಮಾಹಿತಿಗೆ ಜಿಲ್ಲಾ ಮತದಾರರ ಸಹಾಯವಾಣಿ 08192-272953 ಗೆ
ಕರೆ ಮಾಡಬಹುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ
ಚುನಾವಣಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *