ಕೋರೋನಾ ಸೋಂಕು ಹೆಚ್ಚಳ,ಕೇರಳ-ಕರ್ನಾಟಕ ಗಡಿ ಸಂಚಾರ ನಿರ್ಭಂಧ,ಗಡಿನಾಡ ಸಾರ್ವಜನಿಕರ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪರಿಹಾರ ಒದಗಿಸಲು ಸಹಕಾರಿಯಾದ ಯು.ಟಿ.ಖಾದರ್
ಕೇರಳಾದ್ಯಂತ ಕೋರೋನಾ ವ್ಯಾಪಕವಾದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕೇರಳ – ಕರ್ನಾಟಕ ಗಡಿ ಭಾಗದಲ್ಲಿ ಸಂಚಾರ ನಿರ್ಬಂಧಿಸುವ ಮೂಲಕ ಕೋರೋನಾ ಜಿಲ್ಲೆಯಲ್ಲಿ ಹೆಚ್ಚಳವಾಗದಂತೆ ಕ್ರಮ ಕೈಗೊಂಡಿತ್ತು.ಆದರೆ ಇದರಿಂದಾಗಿ ಗಡಿ ಪ್ರದೇಶದ ಜನರಿಗೆ ತಮ್ಮ ದೈನಂದಿನ ಕಾರ್ಯ ಚುಟುವಟಿಕೆಗಳಿಗೆ ಅಡ್ಡಿಯಾಗುವುದನ್ನು ಗಮನಿಸಿದ ಮಾಜಿ ಸಚಿವ ಶಾಸಕ ಯು.ಟಿ.ಖಾದರ್.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದಾಗ ಕರ್ನಾಟಕದ ಆಧಾರ್,ರೇಷನ್ ಕಾರ್ಡ್ ಅಥವಾ ಸ್ಥಳೀಯ ಪಂಚಾಯತ್ ಪ್ರಮಾಣ ಪತ್ರ ಇದ್ದಲ್ಲಿ ಸಂಚರಿಸಲು ಅನುವು ಮಾಡಿ ಕೊಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಕರ್ನಾಟಕ – ಕೇರಳ ಗಡಿ ಪ್ರದೇಶ ಬಹುತೇಕ ನನ್ನ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದು ಕೇರಳದಲ್ಲಿ ವ್ಯಾಪಕವಾಗಿ ಕೋರೋನಾ ಹರಡಿದ್ದು ನಮ್ಮಲ್ಲಿ ಹರಡದಂತೆ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತ ಇಂಥಹ ಕ್ರಮಗಳು ಕೈಗೊಂಡಿದ್ದು ಸಾರ್ವಜನಿಕರು ಸಹಕರಿಸಿ ಅಗತ್ಯ ಸಂದರ್ಭಗಳಲ್ಲಿ ಮಾತ್ರ ತಮ್ಮ ಕರ್ನಾಟಕದ ಗುರುತಿನ ಚೀಟಿಯನ್ನು ಬಳಸಬೇಕಾಗಿ ಯು.ಟಿ.ಖಾದರ್ ಈ ಸಂದರ್ಭದಲ್ಲಿ ಮನವಿ ಮಾಡಿದರು.
ಅಲ್ಲದೆ ಗಡಿ ಪ್ರದೇಶದ ಪ್ರತಿಯೊಬ್ಬರಿಗೂ ಆದಷ್ಷು ಬೇಗನೇ ಕೋವಿಡ್ ಲಸಿಕೆಯನ್ನು ಒದಗಿಸಬೇಕೆಂದು ಅವರು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.