ಕರ್ನಾಟಕ ತಾಂಡ ಅಭಿವೃದ್ದಿ ನಿಗಮದಿಂದ
ಅನುಷ್ಟಾನಗೊಳಿಸುತ್ತಿರುವ ವಿವಿಧ ಯೋಜನೆಯಡಿ ಸಾಲ
ಮತ್ತು ಸಹಾಯಧನ ಸೌಲಭ್ಯ ಕಲ್ಪಿಸಲು ಬಂಜಾರ ಅಥವಾ
ಲಂಬಾಣಿ ಸಮುದಾಯದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಯೋಜನೆ(ನೇರಸಾಲ),
ಐ.ಎಸ್.ಬಿ.ಯೋಜನೆ, ಎಂ.ಸಿ.ಎಫ್. ಪ್ರೇರಣಾ ಯೋಜನೆ, ಗಂಗಾ
ಕಲ್ಯಾಣ ಯೋಜನೆಯಡಿ ಅರ್ಹ ಫಲಾಪೇಕ್ಷಿಗಳು ಅವಶ್ಯ
ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ನೇರಸಾಲ ಯೋಜನೆಯಲ್ಲಿ ಹಣ್ಣು ಹಂಪಲು, ಮೀನು,
ಮಾಂಸ, ಕುರಿ, ಹಂದಿ, ಮೊಲ, ಹಸು ಸಾಕಾಣಿಕೆ, ಮಳಿಗೆ,
ತಳ್ಳುಗಾಡಿ ದುಡಿಮೆ ಇತ್ಯಾದಿ ಕಿರು ಆರ್ಥಿಕ ಚಟುವಟಿಕೆಗಳಿಗೆ
ಘಟಕ ವೆಚ್ಚ ರೂ.50,000 ಸಾಲಕ್ಕೆ ರೂ.25,000 ಗರಿಷ್ಠ
ಸಹಾಯಧನದೊಂದಿಗೆ ಸೌಲಭ್ಯವನ್ನು ನಿಗಮದಿಂದ
ನೇರವಾಗಿ ಮಂಜೂರು ಮಾಡಲಾಗುವುದು.
ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಲ್ಲಿ ಅರ್ಹ
ನಿರುದ್ಯೋಗಿಗಳು ಸ್ವಯಂ ಉದ್ಯೋಗದಲ್ಲಿ
ತೊಡಗಿಕೊಂಡು ಆದಾಯ ಗಳಿಸಲು ಘಟಕ ವೆಚ್ಚಕ್ಕೆ
ಬಾಂಕಿನಿಂದ ಮಂಜೂರಾದ ಸಾಲದ ಶೇ.70ರಷ್ಟು ಅಥವಾ ಗರಿಷ್ಠ
ರೂ.2 ಲಕ್ಷದವರೆಗೆ ಸಹಾಯಧನ ಮಂಜೂರು
ಮಾಡಲಾಗುವುದು.
ಪ್ರೇರಣಾ ಯೋಜನೆಯಡಿ, ಮಹಿಳೆಯರಲ್ಲಿ ಗುಂಪು
ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮಹಿಳಾ ಗುಂಪುಗಳು
ಸ್ವಯಂ ಉದ್ಯೋಗ ಕೈಗೊಂಡು ಆದಾಯ ಗಳಿಸಲು ಕನಿಷ್ಠ
10 ಸದಸ್ಯರಿರುವ ನೋಂದಾಯಿತ ಮಹಿಳಾ ಸ್ವಸಹಾಯ
ಸಂಘಗಳಿಗೆ ರೂ.2.5 ಲಕ್ಷಗಳ (ಪ್ರತಿ ಸದಸ್ಯರಿಗೆ
ರೂ.15,000 ಸಹಾಯಧನ ಮತ್ತು ರೂ.10,000 ಬೀಜಧನ)
ಸೌಲಭ್ಯ ಮಂಜೂರು ಮಾಡಲಾಗುವುದು.
ಗಂಗಾ ಕಲ್ಯಾಣ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ
ರೈತರು ಹೊಂದಿರುವ ಖುಷ್ಕಿ ಜಮೀನಿಗೆ ರೂ.3.50 ಲಕ್ಷದಿಂದ
ರೂ.4.50 ಲಕ್ಷಗಳ ವೆಚ್ಚದಲ್ಲಿ ಕೊಳವೆಬಾವಿ ನೀರಾವರಿ ಸೌಲಭ್ಯ
ಕಲ್ಪಸಲಾಗುವುದು.
ಭೂ-ಒಡೆತನ ಯೋಜನೆಯಡಿ ಭೂ ರಹಿತ ಮಹಿಳಾ ಕೃಷಿ
ಕಾರ್ಮಿಕರಿಗೆ ರೂ.15 ರಿಂದ 20 ಲಕ್ಷಗಳ ವೆಚ್ಚದಲ್ಲಿ, ಕೃಷಿಗೆ
ಯೋಗ್ಯವಾದ ಜಮೀನನ್ನು ಪ್ರತಿ ಘಟಕದಲ್ಲಿ 2 ಎಕರೆ ಖುಷ್ಕಿ
ಅಥವಾ 1 ಎಕರೆ ತರಿ ಅಥವಾ ಕನಿಷ್ಠ ಅರ್ಧ ಎಕರೆ ಭಾಗಾಯ್ತು
ಅಥವಾ ಘಟಕವೆಚ್ಚಕ್ಕೆ ಲಭ್ಯವಾಗುವಷ್ಟು ಜಮೀನನ್ನು
ನಿಗಮದಿಂದ ಖರೀದಿಸಿ ನೋಂದಣಿ ಮಾಡಿಸಿಕೊಡಲಾಗುವುದು.
ಅರ್ಜಿ ಸಲ್ಲಿಸಲು ಸೆ.05 ಕೊನೆಯ ದಿನವಾಗಿದ್ದು, ನಿಗಮದ
ವೆಬ್‍ಸೈಟ್ ತಿತಿತಿ.bಚಿಟಿರಿಚಿಡಿಚಿಣhಚಿಟಿಜಚಿ.ಞಚಿಡಿ.ಟಿiಛಿ.iಟಿ ಮೂಲಕ ಅರ್ಜಿ
ಸಲ್ಲಿಸಬಹುದು. ಅರ್ಜಿಗಳನ್ನು ಆಯಾ ಶಾಸಕರ
ಅಧ್ಯಕ್ಷತೆಯಲ್ಲಿರುವ ಆಯ್ಕೆ ಸಮಿತಿಯ ಮೂಲಕ
ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಫಲಾಪೇಕ್ಷಿಗಳನ್ನು
ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ
ನಿಗಮದ ಜಿಲ್ಲಾ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು
ಎಂದು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಜಿಲ್ಲಾ
ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.