ಕೋವಿಡ್ ಮಾರ್ಗಸೂಚಿ ಹಾಗೂ ಭಾರತ ಸರ್ಕಾರದ
ಗೃಹ ಮಂತ್ರಾಲಯದ ನಿರ್ದೇಶನದಂತೆ ಈ ಬಾರಿಯ
ಸ್ವಾತಂತ್ರ್ಯೋತ್ಸವ ದಿನ ಆಚರಿಸಲಾಗುವುದು ಎಂದು
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ
ಸ್ವಾತಂತ್ರ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಆಗಸ್ಟ್ 15
ರಂದು ಆಚರಿಸಲಾಗುವ ಸ್ವಾತಂತ್ರ್ಯ ದಿನಾಚರಣೆಗೆ
ಸಂಬಂಧಿಸಿದಂತೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವ ಬಗ್ಗೆ
ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಜಿಲ್ಲೆಯಲ್ಲಿ
ಸದ್ಯ 250 ಕರೊನಾ ಸÀಕ್ರಿಯ ಪ್ರಕರಣಗಳಿವೆ, ಹೀಗಾಗಿ
ಮೈಮರೆಯುವಂತಿಲ್ಲ ಹಾಗೂ ಡೆಲ್ಟಾದ ಹೊಸ ತಳಿಯ 4
ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದ್ದು, ಎಲ್ಲರೂ
ಮತ್ತಷ್ಟು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ಕೊರೊನಾ ಹರಡುವುದನ್ನು ತಡೆಗಟ್ಟುವ
ಹಿನ್ನೆಲೆಯಲ್ಲಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಲಾ-
ಕಾಲೇಜು ವಿದ್ಯಾರ್ಥಿಗಳು, ಎನ್‍ಸಿಸಿ, ಸ್ಕೌಟ್ ಮತ್ತು ಗೈಡ್ ಮಕ್ಕಳು
ಪಾಲ್ಗೊಳ್ಳಲು ಅವಕಾಶ ಇರುವುದಿಲ್ಲ. ಕೇಂದ್ರ ಸರ್ಕಾರದ
ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯನ್ವಯ
ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧಾರಣೆ ಮಾಡಿ
ಮತ್ತು ಸ್ಯಾನಿಟೈಸೇಷನ್ ನಿರ್ವಹಿಸಿ ಹೆಚ್ಚು ಜನರನ್ನು ಸೇರಿಸದೆ
ಜಿಲ್ಲಾ ಮಟ್ಟದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು
ಆಚರಿಸಬೇಕಿದೆ. ಜೊತೆಗೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ
ಕಾರ್ಯಕ್ರಮಗಳು ಇರುವುದಿಲ್ಲ. ಸಂಜೆಯೂ ಸಾಂಸ್ಕøತಿಕ
ಕಾರ್ಯಕ್ರಮಗಳು ಇರುವುದಿಲ್ಲ.
ಆಗಸ್ಟ್ 15 ರ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ
ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವರು
ನೆರವೇರಿಸಲಿದ್ದು, ಈ ಬಾರಿ ಡಿಆರ್, ಸಿವಿಲ್, ಹೋಂ, ಅಬಕಾರಿ, ಅರಣ್ಯ ಮತ್ತು
ಅಗ್ನಿ ಶಾಮಕದಳ ಒಟ್ಟು ಆರು ತಂಡಗಳು ಮಾತ್ರ
ಪಥಸಂಚಲನದಲ್ಲಿ ಪಾಲ್ಗೊಳ್ಳಲಿವೆ. ಎನ್‍ಸಿಸಿ, ಸ್ಕೌಟ್ ಮತ್ತು ಗೈಡ್
ಇತರೆ ವಿದ್ಯಾರ್ಥಿಗಳ ತಂಡಗಳಿಗೆ ಅವಕಾಶ ಇರುವುದಿಲ್ಲ.
ಧ್ವಜಾರೋಹಣದ ನಂತರ ಉಸ್ತುವಾರಿ ಸಚಿವರು
ಸ್ವಾತಂತ್ರ್ಯ ದಿನಾಚರಣೆ ಕುರಿತು ಸಂದೇಶ ನೀಡುವರು.
ಸ್ವಾತಂತ್ರ್ಯೋತ್ಸವದಂದು ಕೋವಿಡ್ ಸೈನಿಕರಾದ
ವೈದ್ಯರು, ಆರೋಗ್ಯ ಸಿಬ್ಬಂದಿಗಳು, ಕೋವಿಡ್
ಗುಣಮುಖರಾದವರು, ಪೌರಕಾರ್ಮಿಕರು ಆಶಾ
ಕಾರ್ಯರ್ಕತೆಯರು, ಅಂಗನವಾಡಿ ಕಾರ್ಯಕರ್ತೆರಿಗೆ
ಗೌರವಿಸಲಾಗುವುದು.
ಅಂದು ಬೆಳಿಗ್ಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ
ಸರಿಯಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದ್ದು,
ಜಿಲ್ಲಾ ಮಟ್ಟದ ಇಲಾಖಾ ಮುಖ್ಯಸ್ಥರು ತಮ್ಮ ತಮ್ಮ
ಕಚೇರಿಗಳಲ್ಲಿ ಅಂದು ಬೆಳಿಗ್ಗೆ 7.30 ಗಂಟೆಗೆ ತಪ್ಪದೇ
ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ, ನಂತರ
ಜಿಲ್ಲಾಡಳಿತ ಭವನದ ಆವರಣದಲ್ಲಿ ಬೆಳಿಗ್ಗೆ 7.50 ಕ್ಕೆ ನಡೆಯುವ
ಧ್ವಜಾರೋಹಣ ಕಾರ್ಯಕ್ರಮಕ್ಕೆ ಹಾಜರಿರುವಂತೆ
ಸೂಚಿಸಿದರು.
ಧ್ವಜಾರೋಹಣದ ಪೂರ್ವ ಸಿದ್ದತೆ, ಧ್ವಜ ಕಟ್ಟುವ ಇತರೆ
ಜವಾಬ್ದಾರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು, ಉಪ
ನಿರೀಕ್ಷಕರು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮತ್ತು
ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ಇವರಿಗೆ ಜವಾಬ್ದಾರಿ
ವಹಿಸಲಾಯಿತು.
ವೇದಿಕೆ ನಿರ್ಮಾಣ, ಶಾಮಿಯಾನ, ವಿದ್ಯುತ್ ದೀಪಾಲಂಕಾರ ಇತರೆ
ವ್ಯವಸ್ಥೆಗಳನ್ನು ಪಾಲಿಕೆ ಆಯುಕ್ತರು, ನೀರಿನ
ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆ ವೇದಿಕೆಗೆ
ಹೂಕುಂಡ, ಅಲಂಕಾರ ವ್ಯವಸ್ಥೆಯನ್ನು ತೋಟಗಾರಿಕೆ
ಇಲಾಖೆಯವರು ವಹಿಸಬೇಕೆಂದರು.
ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಣ ಜೊತೆಗೆ
ವಿತರಣೆಯ ಜವಾಬ್ದಾರಿಯನ್ನು ಉಪವಿಭಾಗಾಧಿಕಾರಿಗಳು
ಮತ್ತು ವಾರ್ತಾಧಿಕಾರಿಗಳಿಗೆ ವಹಿಸಲಾಯಿತು. ಕ್ರೀಡಾಂಗಣ
ಸಿದ್ದತೆ ಮತ್ತು ಸ್ವಚ್ಚತೆಯ ಜವಾಬ್ದಾರಿಯನ್ನು ಪಾಲಿಕೆ
ಆಯುಕ್ತರು, ಡಿಹೆಚ್‍ಓ, ಅಗ್ನಿಶಾಮಕ ದಳ,
ಲೋಕೋಪಯೋಗಿ ಇಲಾಖೆ ಇವರಿಗೆ ನೀಡಲಾಯಿತು.
ಸರ್ಕಾರಿ ಕಟ್ಟಡಗಳ ಮೇಲೆ ದೀಪಾಂಲಕಾರ: ಕೇಂದ್ರ ಹಾಗೂ
ರಾಜ್ಯ ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ಆಗಸ್ಟ್ 14 ಮತ್ತು
15 ರಂದು ವಿದ್ಯುತ್ ದೀಪಾಂಲಕಾರ ಮಾಡಲು ಆಯಾ
ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ನಗರದ ಮುಖ್ಯ
ವೃತ್ತಗಳಾದ ಜಯದೇವ ವೃತ್ತ, ಹೊಂಡದ ವೃತ್ತ, ಗುಂಡಿ
ವೃತ್ತ, ಗಾಂಧಿ ವೃತ್ತ, ರಾಮ್ ಅಂಡ್ ಕೋ ವೃತ್ತ, ಕೆ.ಇ.ಬಿ
ವೃತ್ತ, ಶಿವಪ್ಪ ವೃತ್ತ, ಹಗೆದಿಬ್ಬ ವೃತ್ತ, ಶಿವಾಜಿ ವೃತ್ತ
ಅಂಬೇಡ್ಕರ್ ವೃತ್ತ ಮುಂತಾದ ಪ್ರಮುಖ ವೃತ್ತಗಳಿಗೆ
ದೀಪಾಲಂಕಾರ ಮಾಡಲು ಅಭಿಯಂತರರು, ಕೆಆರ್‍ಐಡಿಎಲ್
ದಾವಣಗೆರೆ ಇವರಿಗೆ ವಹಿಸಲಾಯಿತು. ಮತ್ತು ಜಿಲ್ಲಾಡಳಿತ
ಭವನದ ಕಟ್ಟಡದ ಮೇಲೆ ವಿದ್ಯುತ್ ದೀಪಾಲಂಕಾರ ಮಾಡುವ
ಜವಾಬ್ದಾರಿಯನ್ನು ಆಯುಕ್ತರು, ಮಹಾನಗರ ಪಾಲಿಕೆ
ದಾವಣಗೆರೆ ಇವರಿಗೆ ವಹಿಸಲಾಯಿತು ಹಾಗೂ ಕಾರ್ಯಪಾಲಕ
ಇಂಜನಿಯರ್, ಬೆಸ್ಕಾಂ, ದಾವಣಗೆರೆ ಇವರಿಗೆ ಅಗತ್ಯ ಸಹಕಾರ
ನೀಡುವಂತೆ ತಿಳಿಸಲಾಯಿತು.
ಪ್ಲಾಸ್ಟಿಕ್ ಧ್ವಜಗಳನ್ನು ಕಡ್ಡಾಯವಾಗಿ ಬಳಸುಂತಿಲ್ಲ.
ಒಂದು ಪಕ್ಷ ಅಂಗಡಿಗಳಲ್ಲಿ, ವ್ಯಾಪಾರ ವಹಿವಾಟು
ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಧ್ವಜಗಳ ಮಾರಾಟ ಮತ್ತು
ಬಳಕೆ ಮಾಡಿದಲ್ಲಿ ಅಂತಹವರ ವಿರುದ್ದ ಮಾಲಿನ್ಯ
ನಿಯಂತ್ರಣ ಮಂಡಳಿಯವರು ನಿಯಮಾನುಸಾರ
ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
-ಜಿಲ್ಲಾಧಿಕಾರಿ – ಮಹಾಂತೇಶ್
ಬೀಳಗಿ
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ ರಿಷ್ಯಂತ, ಜಿ.ಪಂ.
ಸಿಇಒ ಡಾ.ವಿಜಯ ಮಹಾಂತೇಶ್ ದಾನಮ್ಮನವರ್, ಎಸಿ ಮಮತಾ
ಹೊಸಗೌಡರ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್
ಮುದಜ್ಜಿ, ಡಿಡಿಪಿಐ ಪರಮೇಶ್ವರಪ್ಪ, ಡಿಹೆಚ್‍ಓ ನಾಗರಾಜ್, ಮಹಿಳಾ
ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ
ವಿಜಯಕುಮಾರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ
ಕೌಸರ್ ರೇಷ್ಮಾ, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.