ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಪಲನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು ಸಾಮಾನ್ಯ ಸಭೆಯನ್ನು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನೇತೃತ್ವದಲ್ಲಿ ನಡೆಸಲಾಯಿತು.
ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಕಾಶ್ ಮುಸ್ಲಿಂ ಆಳ ರವರು ಈ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯದ ಬಗ್ಗೆ ತಿಳಿಸಿ ಎಂದು ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರವನ್ನು p D O ಹೇಳಿದರು.
ನಂತರ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್ ರವರು ಮಾತನಾಡುತ್ತಾ,
ಪ ಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಹಳ್ಳಿಗಳಲ್ಲಿ ಸ್ಮಶಾನಕ್ಕೆ ಜಾಗ ಇಲ್ಲ ಆದಕಾರಣ ಸರ್ಕಾರ ಜಾಗವನ್ನು ಗುರುತಿಸಿ ಮೇಲ್ಮಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಕೊಡಿಸುವ ಕೆಲಸ ಮಾಡಬೇಕು ಎಂದರು.
ವಿಪರ್ಯಾಸದ ಸಂಗತಿಯೆಂದರೆ
ಪ ಲಪನಹಳ್ಳಿ ಗ್ರಾಮದಲ್ಲಿ
ಎಸ್ಸಿ ಎಸ್ಟಿ ವರ್ಗದ ಜನರು ಮರಣ ಹೊಂದಿದರೆ ಹೆಣವನ್ನು ಹೂತಲಿಕ್ಕೆ
ಜಾಗವಿಲ್ಲ ತುರ್ತಾಗಿ ಜಾಗವನ್ನು ಗುರುತಿಸಿ ಕೊಡಿಸಬೇಕೆಂದು ಪ್ರಕಾಶರವರು ಪಿ ಡಿ ಓ ಗೆ ಒತ್ತಾಯಿಸಿದರು.
ಪಿಆರ ಐ ಡಿ ಅವರು ಶಾಲಾ ಕಾಂಪೌಂಡ್ ವಿಚಾರವಾಗಿ 4 ಲಕ್ಷ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಆಪಾದಿಸಿದರು.
ಮನೆ ಕಂದಾಯ ಮತ್ತು ನೀರಿನ ಕಂದಾಯ ವಸೂಲಾತಿ ಬಗ್ಗೆ ಚರ್ಚೆ ಮಾಡಲಾಯಿತು. ಕೆಎಸ್ಆರ್ಟಿಸಿ ಬಸ್ಸುಗಳು ದಿನನಿತ್ಯ ಹೊನ್ನಾಳಿ ಮತ್ತು ನ್ಯಾಮತಿ ಮಾರ್ಗವಾಗಿ ಕೋಡಿಕೊಪ್ಪ ಕಂಚಿನ ಹಳ್ಳಿ ಗಂಜಿಹಳ್ಳಿ ಪಲನಹಳ್ಳಿ ಮತ್ತು ಮುಸ್ಸೇನಾಳ ಗ್ರಾಮಕ್ಕೆ ಬಂದು ಬೆಳಗ್ಗೆ ಮಧ್ಯಾಹ್ನ ಸಂಜೆ ಮೂರು ವತ್ತು ನಮ್ಮಹಳ್ಳಿಗಳಿಗೆ ಬಸ್ಸುಗಳು ಬಂದು ಹೋದರೆ ಮಕ್ಕಳಿಗೆ ಕೂಲಿ ಕಾರ್ಮಿಕರಿಗೆ ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳಿದವರು.ಇದಕ್ಕೆ ಉತ್ತರ ವಾಗಿ P D O ರವರು ಡಿಪೋ ಮ್ಯಾನೇಜರ್ ರವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಅನಿತಾ ಉಪಾಧ್ಯಕ್ಷರಾದ ಗಂಜೇನಹಳ್ಳಿ ಪ್ರವೀಣ್ PDO ಜೈಕುಮಾರ್ ಸದಸ್ಯರುಗಳಾದ ಪ್ರಕಾಶನಾಯ್ಕ ಮುಸ್ಸೇನಾಳ್ ನಾಗೇಶ್ ನಾಯ್ಕ ಗೋವಿಂದರಾಜು ನೇತ್ರ ಜಯಶ್ರೀ ನಟರಾಜ್ ಶಕುಂತಲಾಬಾಯಿ ಪ್ರೀತಿ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ