ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ವಠಾರದಲ್ಲಿ ನಿರ್ಮಾಣ ಆಗಲಿರುವ ಆಕ್ಸಿಜ ನ್ ಉತ್ಪಾದನಾ ಘಟಕದ ಶಂಕು ಸ್ಥಾಪನಾ ಕಾರ್ಯಕ್ರಮ ಗುರುವಾರ ನಡೆಯಿತು.
ಶಂಕು ಸ್ಥಾಪನೆ ನೆರವೇರಿಸಿದ ನಗರಸಭೆಯ ಅಧ್ಯಕ್ಷೆ ಚಿತ್ರಕಲಾ ಮಾತನಾಡಿ, ಶಾಸಕರ ನೇತೃತ್ವದಲ್ಲಿ ಉಳ್ಳಾಲಕ್ಕೆ ಹಲವು ಯೋಜನೆಗಳು ಬಂದಿದ್ದು ಅದರ ಭಾಗವಾಗಿ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ನಗರ ಸಭಾ ಉಪಾಧ್ಯಕ್ಷ ಅಯ್ಯೂಬ್ ಮಂಚಿಲ ಮಾತನಾಡಿ ನಮ್ಮ ಪ್ರೀತಿಯ ಶಾಸಕ ಯು.ಟಿ ಖಾದರ್ ಅವರು ಉತ್ತಮವಾದ ಆರೋಗ್ಯ ಪೂರ್ಣವಾದ ಯೋಜನೆಗಳನ್ನು ಈಗಾಗಲೇ ತಂದಿದ್ದಾರೆ, ಚಿತ್ರನಟ ಸಾಮಾಜಿಕ ಚಿಂತನೆಗಳನ್ನು ತೊಡಗಿಸಿಕೊಂಡಂತಹ ಸೋನು ಸೂದು 45 ಲಕ್ಷ ಮತ್ತು ಮಿಕ್ಕಿದ ಹಣವನ್ನು ಜಿಲ್ಲಾಡಳಿತದ ಮುಖೇನ ಶಾಸಕ ಯು.ಟಿ.ಖಾದರ್ ಅವರು ನೀಡಿದ್ದಾರೆ, ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿದ್ಯಾ ಸಾಗರ್ ಸಾಮಾಜಿಕ ಬದ್ದತೆಯಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ದೇವರು ಅವರಿಗೆ ಮತ್ತು ಶಾಸಕ ಯು.ಟಿ.ಖಾದರ್ ಅವರಿಗೆ ಆರೋಗ್ಯ ಆಯುಷ್ಯ ಕರುಣಿಸಲಿ ಎಂದು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ನಗರಸಭೆಯ ಸದಸ್ಯರಾದ ಅಶ್ರಫ್, ಸಪ್ನಾ ಹರೀಶ್, ಅಬ್ದುಲ್ ಜಬ್ಬಾರ್, ಸಮುದಾಯ ಆರೋಗ್ಯ ಕೇಂದ್ರದ ಡಾ.ವಿದ್ಯಾಸಾಗರ್, ಡಾ.ಪ್ರಶಾಂತ್, ಸಮುದಾಯ ಆರೋಗ್ಯ ಕೇಂದ್ರ ಸಮಿತಿಯ ಸದಸ್ಯರಾದ ಎ.ಕೆ ಮೊಯಿದಿನ್, ರಿಚರ್ಡ್, ರವಿ ಗಾಂಧಿನಗರ, ಅಬ್ದುರ್ರಹ್ಮಾನ್ ಅದ್ದ, ಸಾಜಿದ್ ಉಳ್ಳಾಲ್, ಮನ್ಸೂರ್, ಮಲಿಕ್, ಮೊದಲಾದವರು ಉಪಸ್ಥಿತರಿದ್ದರು.