ದಿನಾಂಕ 06-08-2021 ರಂದು ಯಮಕನಮರಡಿ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿಯವರು ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಪಂಚಾಯಿತಿ ಹುದಲಿ ಗ್ರಾಮಕ್ಕೆ ಬೆಟ್ಟಿ ಕೊಟ್ಟು ವಿಪರೀತವಾದ ಮಳೆಯಿಂದ ಕೆಟ್ಟ ರಸ್ತೆಗಳನ್ನು ವೀಕ್ಷಿಸಿ ಆಮೇಲೆ ತಕ್ಷಣವೇ ಜೆಸಿಬಿ ಮೂಲಕ ರಸ್ತೆಯ ಮೇಲೆ ಬರುವ ನೀರನ್ನು ರಸ್ತೆಯ ಬದಿಯಿಂದ ದಾಟಿ ಹೋಗುವ ಮೂಲಕ ಕೇಲವು ಸಲಹೆ ಸೂಚನೆ ಕೊಟ್ಟು ಹಾಗೆ ಗ್ರಾಮದ ವಿವಿಧ ಕುಂದು ಕೊರತೆಯನ್ನು ವಿಚಾರಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಎಸ್ ಟಿ ಅಧ್ಯಕ್ಷರಾದ ಶ್ರೀ ಬಾಳೇಶ ದಾಸನಟ್ಟಿಯವರು ಹಾಗೂ ಹದಲಿ ಗ್ರಾ.ಪಂ ಸದಸ್ಯರು ಹಾಗೂ ಪಿ.ಕೆ.ಪಿ.ಎಸ್ ಅಧ್ಯಕ್ಷರು ಸದಸ್ಯರು. ಹಿರಿಯರು ಮತ್ತು ಯುವ ಮುಖಂಡರು ಉಪಸ್ಥಿತರಿದ್ದರು.