ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯಲ್ಲಿ ಖಾಲಿ ಇರುವ
ಲೆಕ್ಕಿಗರ ಹುದ್ದೆಯನ್ನು ಒಂದು ವರ್ಷದ ಅವಧಿಗೆ
ಗೌರವಧನ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲು ಉದ್ದೇಶಿಸಿದ್ದು,
ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
       ಅರ್ಜಿ ಸಲ್ಲಿಸುವವರು ಬಿ.ಕಾಂ ಪದವಿ ಹೊಂದಿದ್ದು,
ಅಂಕೌಂಟೆಂಟ್ ಹುದ್ದೆಯಲ್ಲಿ ಕನಿಷ್ಠ 5 ವರ್ಷಗಳ
ಅನುಭವವಿರಬೇಕು. ಲೆಕ್ಕಪತ್ರದಲ್ಲಿ ಬ್ಯಾಂಕ್
ವ್ಯವಹಾರಗಳನ್ನು, ಸರ್ಕಾರದ ಲೆಕ್ಕಪತ್ರಗಳನ್ನು
ತಯಾರಿಸುವ ಲೆಕ್ಕಪತ್ರಗಳಿಗೆ ಸಂಬಂಧಿಸಿದ ದಾಖಲೆ,
ರಿಜಿಸ್ಟರ್‍ಗಳ ಕುರಿತು ಮಾಹಿತಿ ಹೊಂದಿರಬೇಕು. ಕನ್ನಡ
ಮತ್ತು ಇಂಗ್ಲೀಷ್ ಮಾತನಾಡುವ ಹಾಗೂ ಬರೆಯುವಲ್ಲಿ
ಉತ್ತಮ ಶೈಲಿ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ
ಹೊಂದಿರಬೇಕು. ಟ್ಯಾಲಿ ಸಾಫ್ಟ್‍ವೇರನ್ನು ಉಪಯೋಗಿಸುವ
ಜ್ಞಾನ ಹಾಗೂ ಕೌಶಲ್ಯ ಮತ್ತು ಕಚೇರಿಯ ಪತ್ರ,
ಲೆಕ್ಕಪತ್ರಗಳ ವ್ಯವಹಾರವನ್ನು ಗಣಕೀಕೃತದಲ್ಲಿ
ನಮೂದಿಸಿ ಕೇಂದ್ರ ಕಚೇರಿಗೆ ಕಂಪ್ಯೂಟರ್‍ನಲ್ಲಿ ಕಳುಹಿಸುವ
ಕುರಿತು ಪರಿಣತಿ ಹೊಂದಿರಬೇಕು. ವಯೋಮಿತಿ 40 ವರ್ಷ
ಮೀರಿರಬಾರದು ಹಾಗೂ ಸ್ವವಿವರದ ಅರ್ಜಿಯ ಜೊತೆ  ರೂ.5
ಸ್ಟಾಂಪ್ ಹಚ್ಚಿದ ಲಕೋಟೆಯನ್ನು ಲಗತ್ತಿಸಬೇಕು.
       ಹುದ್ದೆಗೆ ಪ್ರತಿ ತಿಂಗಳು ರೂ.13,310 ಗೌರವಧನ
ನೀಡಲಾಗುವುದು. ಅಭ್ಯರ್ಥಿಗಳು ಸ್ವವಿವರದ
ಭಾವಚಿತ್ರವುಳ್ಳ ಅರ್ಜಿಯನ್ನು ಭರ್ತಿ ಮಾಡಿ ಆ.21 ರ ಒಳಗೆ
ಯೋಜನಾ ನಿರ್ದೇಶಕರು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ
ಸೊಸೈಟಿ, ಕೊಡಿ ಸಂ. 42, ಜಿಲ್ಲಾಡಳಿತ ಭವನ, ದಾವಣಗೆರೆ ಇವರಿಗೆ
ಸಲ್ಲಿಸಬೇಕು ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನಾ
ಸೊಸೈಟಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *