ಪ್ರಧಾನಿ ನರೇಂದ್ರ ಮೋದಿ ಅವರು ಉದ್ದೇಶಪೂರ್ವಕವಾಗಿ ರಾಜೀವ್ ಗಾಂಧಿ ರವರ ಹೆಸರಿನಲ್ಲಿ ನೀಡುವ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಬದಲಾಯಿಸಿ ಹಾಗೂ ಇ.ಡಿ ಇಲಾಖೆ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿರುವ ಮೋದಿರವರ ಈ ಇಬ್ಬಗೆ ನೀತಿಯನ್ನು ಖಂಡಿಸಿ 7/8/2021 ಇಂದು ಪ್ರತಿಭಟನೆ ನಡೆಸಲಾಯಿತು .
ಖೇಲ್ ರತ್ನ ಪ್ರಶಸ್ತಿಗೆ ಕ್ರೀಡಾ ಕ್ಷೇತ್ರದ ದಂತಕತೆ ಧ್ಯಾನ್ ಚಂದ್ ರವರ ಹೆಸರನ್ನು ಮರುನಾಮಕರಣ ಮಾಡಿದ್ದಾರೆ ಅದನ್ನು ಸ್ವಾಗತಿಸುತ್ತೇವೆ ಆದರೆ ರಾಜೀವ್ ಗಾಂಧಿ ರವರು ಹಾಗೂ ಧ್ಯಾನ್ ಚಂದ್ ರವರು ದೇಶಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ, ಆದರೆ ರಾಜೀವ್ ಗಾಂಧಿ ರವರ ಹೆಸರನ್ನು ಬದಲಾಯಿಸುವ ಬದಲು ಧ್ಯಾನ್ ಚಂದ್ ಅವರ ಹೆಸರಿನಲ್ಲೇ ಹೊಸ ಪ್ರಶಸ್ತಿಗೆ ಅವರ ಹೆಸರನ್ನು ನಾಮಕರಣ ಮಾಡಬಹುದಾಗಿತ್ತು. ಆದರೆ ರಾಜೀವ್ ಗಾಂಧಿ ರವರ ಬಲಿದಾನವನ್ನು ನೆನೆಯದ ನರೆಂದ್ರ ಮೋದಿ ಉದ್ದೇಶಪೂರ್ವಕವಾಗಿ ಅವರ ಹೆಸರನ್ನ ಬದಲಾಯಿಸಿರುವುದು ಸೇಡಿನ ರಾಜಕೀಯದ ಮನೋಭಾವವನ್ನು ಎತ್ತಿ ತೋರುತ್ತದೆ
ನರೇಂದ್ರ ಮೋದಿ ದೇಶದ ಅಭಿವೃದ್ಧಿಯನ್ನು ಮರೆತು ಬೆಲೆಯೇರಿಕೆಗೆ ಕಡಿವಾಣ ಹಾಕದೆ ಕೇವಲ ಪ್ರಚಾರದಲ್ಲಿ ತೊಡಗಿ ಸೇಡಿನ ರಾಜಕೀಯ ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ನರೇಂದ್ರ ಮೋದಿಯ 7ವರ್ಷದ ಸಾಧನೆ ಏನೆಂದರೆ ದಾಖಲೆ ಮಟ್ಟದ ಬೆಲೆ ಏರಿಕೆ, ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿ ಕೇವಲ ಪ್ರಚಾರದಲ್ಲೇ ದೇಶದ ತೆರಿಗೆ ಹಣ ವ್ಯಯ ಮಾಡಿ ವಿದೇಶ ಸುತ್ತಿ ದೇಶದ ಜನರ ಮೇಲೆ ತೆರಿಗೆ ಹೊರೆಯನ್ನು ಏರಿಕೆ ಮಾಡಿರುವುದು ಮೋದಿ ರವರ ಸಾಧನೆಯಾಗಿದೆ. ಆದರೆ ದೇಶದ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ನರೇಂದ್ರ ಮೋದಿ ಇಂತಹ ಕೀಳುಮಟ್ಟದ ರಾಜಕೀಯ ಜೀವನ ನಡೆಸುತ್ತಿದ್ದಾರೆ .
ರಾಜ್ಯದಲ್ಲಿ ಬಿಜೆಪಿ ನಾಯಕರೇ ಬಿಜೆಪಿ ಶಾಸಕರು ಹಾಗೂ ಮಂತ್ರಿಗಳ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ ಅವರ ಮನೆಯ ಮೇಲೆ ಇಡಿ ಇಲಾಖೆ ದಾಳಿ ನಡೆಸದೆ ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಶಾಸಕರ ಮೇಲೆ ದಾಳಿ ನಡೆಸಲು ಕಾರಣ ಏನೆಂಬುದನ್ನು ಜನತೆಗೆ ಮೋದಿ ತಿಳಿಸಬೇಕು ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲದೇ ಹೋದರೆ ಭ್ರಷ್ಟಾಚಾರದಲ್ಲಿ ತಾನು ಶಾಮೀಲಾಗಿದ್ದಾನೆ ಎಂಬುದನ್ನು ಜನರ ಮುಂದೆ ಒಪ್ಪಿಕೊಳ್ಳಬೇಕು
ಮೋದಿಯ ದುರಾಡಳಿತವನ್ನು ದೇಶದ ಪ್ರತಿಯೊಬ್ಬ ನಾಗರಿಕರು ಇಂದು ಖಂಡಿಸುತ್ತಿದ್ದಾರೆ ಮೋದಿ ರಾಜಿನಾಮೆ ನೀಡಬೇಕೆಂದು ಪ್ರತಿಯೊಬ್ಬರು ಆಗ್ರಹಪಡಿಸುತ್ತಿದ್ದಾರೆ ಹಾಗಾದರೆ ನರೇಂದ್ರ ಮೋದಿ ದೇಶದ ಜನರ ಮಾತಿಗೆ ಬೆಲೆ ಕೊಟ್ಟು ರಾಜೀನಾಮೆ ನೀಡಿ ತೊಲಗಬೇಕು ಎಂದು ಆಗ್ರಹ ಪಡಿಸಿ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್.ಮನೋಹರ್, ಜಿ.ಜನಾರ್ದನ್ ಎ.ಆನಂದ್, ಎಂ.ಎ.ಸಲೀಂ, ಈ.ಶೇಖರ್, ಪುಟ್ಟರಾಜ, ಉಮೇಶ್, ಮಹೇಶ್,ಪ್ರಕಾಶ್, ಚಂದ್ರುಶೇಕರ್, ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.