ತೋಟಗಾರಿಕೆ ಇಲಾಖೆ ವತಿಯಿಂದ 2021-22ನೇ ಸಾಲಿನ
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ (ಎನ್‍ಹೆಚ್‍ಎಂ)
ವಿವಿಧ ಕಾರ್ಯಕ್ರಮಗಳ ಅನುಷ್ಠಾನಗೊಳಿಸಲು
ಅನುಮೋದನೆಯಾಗಿದ್ದು, ಹರಿಹರ ತಾಲ್ಲೂಕಿನ ರೈತರಿಂದ ಅರ್ಜಿ
ಆಹ್ವಾನಿಸಲಾಗಿದೆ.
ಯೋಜನೆಯಡಿ ಕಂದು ಮತ್ತು ಅಂಗಾಂಶಬೆಳೆ,
ಕಾಳುಮೆಣಸು, ಮಾವು, ಡ್ರ್ಯಾಗನ್ ಫ್ರೂಟ್ಸ್ ಮತ್ತು ಹೂ
ಬೆಳೆ ಪ್ರದೇಶ ವಿಸ್ತರಣೆ, ಕೃಷಿಹೊಂಡ, ಸಮುದಾಯ
ಕೃಷಿಹೊಂಡ, ಪ್ಯಾಕ್ ಹೌಸ್, ಈರುಳ್ಳಿ ಶೇಖರಣಾ ಘಟಕ ನಿರ್ಮಾಣ,
ಸಂಸ್ಕರಣಾ ಘಟಕ ಮತ್ತು ಮಿನಿಟ್ರ್ಯಾಕ್ಟರ್ ಹಾಗೂ ಇನ್ನಿತರೆ
ಕಾರ್ಯಕ್ರಮಗಳ ಅನುಷ್ಠಾನಗೊಳಿಸಲು
ಅನುಮೋದನೆಯಾಗಿದೆ. ಆಸಕ್ತ ರೈತರು ಆ.16 ರೊಳಗೆ
ಅರ್ಜಿಯೊಂದಿಗೆ ತಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್
ಖಾತೆ ಪುಸ್ತಕದ ಜೆರಾಕ್ಸ್, ಪಾಸ್‍ಪೋರ್ಟ್ ಅಳತೆಯ
ಫೋಟೊಗಳೊಂದಿಗೆ ಹಿರಿಯ ಸಹಾಯಕ ತೋಟಗಾರಿಕೆ
ನಿರ್ದೇಶಕರು, ಹರಿಹರ ಕಛೇರಿಯಲ್ಲಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಹೋಬಳಿ ಮಟ್ಟದ
ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು
ಸಂಪರ್ಕಿಸಬಹುದೆಂದು ಹಿರಿಯ ಸಹಾಯಕ ತೋಟಗಾರಿಕೆ
ನಿರ್ದೇಶಕಿ ಜಿ.ಪಿ.ರೇಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.