ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ ರವೀಂದ್ರನಾಥ್ ರವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 32ನೇ ವಾರ್ಡಿನಲ್ಲಿ ಹಿಂದುಳಿದ ವರ್ಗಗಳ ಅಸಂಘಟಿತ ಕಾರ್ಮಿಕರುಗಳಿಗೆ ಆಹಾರದ ಕಿಟ್ಟುಗಳನ್ನು ನಿರಂತರವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಓಬಿಸಿ ಅಧ್ಯಕ್ಷರಾದ ಅಡಾಣಿ ಸಿದ್ದಪ್ಪ , ಓಬಿಸಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಎಸ್. ಪಿ, ದಾವಣಗೆರೆ ಭಾಜಪ ಉತ್ತರ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ಉಮೇಶ್ ಪಾಟೀಲ್, ಭಾಜಪ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾದ ಸದಸ್ಯರಾದ ಅಬ್ಧುಲ್ ಮಜೀದ್ ,ಮಹಿಳಾ ಮೋರ್ಚಾದ ರೇಖಾ ವಾಲಿ,ಜ್ಯೋತಿ ಬಸಪ್ಪ,ಚಂದ್ರಕಲಾ, ಪರಶುರಾಮ್ ಜಿ.ಎಸ್. ಕೆ.ನಾಗೇಶ್ ಕುಮಾರ್, ಮಂಜುನಾಥ್ ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.
.