ಏಕಾಏಕಿ ವೀಕೆಂಡ್ ಲಾಕ್ ಡೌನ್,ನಿಗದಿಪಡಿಸಿದ ಮದುವೆ ಹಾಗೂ ಮದುವೆಗಳಿಗಾಗಿ ಇತರ ಕಡೆಗಳಿಂದ ಪ್ರಯಾಣ ಬೆಳೆಸಿದ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿದ ಮಾಜಿ ಸಚಿವ ಶಾಸಕ ಯು.ಟಿ.ಖಾದರ್
ಸರಕಾರದ ಏಕಾಏಕಿ ವಾರಾಂತ್ಯ ಲಾಕ್ ಡೌನ್ ನಿಂದಾಗಿ ಈಗಾಗಲೇ ನಿಗದಿಪಡಿಸಿರುವ ಮದುವೆ ಹಾಗೂ ಮದುವೆಗಳಿಗಾಗಿ ಇತರ ಕಡೆಯಿಂದ ಪ್ರಯಾಣ ಬೆಳೆಸಿದವರಿಗೆ ಸಮಸ್ಯೆಯಾಗುತ್ತಿದ್ದು ಇದರ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಿದ ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ಮದುವೆ ಹಾಗೂ ಮದುವೆಗಾಗಿ ಪ್ರಯಾಣ ಬೆಳೆಸುವ ಪ್ರಯಾಣಿಕರರಿಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸರಕಾರದ ಮುಖ್ಯ ಕಾರ್ಯದರ್ಶಿಗಳು ವಿನಾಯಿತಿ ನೀಡುವುದಾಗಿ ತಿಳಿಸಿದ್ದು ಈಗಾಗಲೇ ನಿಗದಿಪಡಿಸಿದ ಮದುವೆಯ ಕುಟುಂಬಸ್ಥರು ನಿರಾಳರಾಗಿದ್ದಾರೆ.
ತಜ್ಞರ ವರದಿ ಆಧರಿಸಿ ಸರಕಾರ ಇಂಥಹ ನಿಯಮಗಳನ್ನು ಕೈಗೊಳ್ಳುವಾಗ ಇದರಿಂದಾಗಿ ಅನಾನುಕೂಲ ವಾಗುವವರ ಬಗ್ಗೆಯೂ ಈ ಸಂದರ್ಭದಲ್ಲಿ ಆಲೋಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಯು.ಟಿ.ಖಾದರ್ ರವರು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಒತ್ತಾಯಿಸಿದರು.